ಹಿರಿಯಡಕ: ಉಡುಪಿ ಜಿಲ್ಲೆಯ ಹಿರಿಯಡಕ ಅಂಜಾರು ಶೇಡಿಗುರಿ ಎಂಬಲ್ಲಿ ವ್ಯಕ್ತಿಯೊಬ್ಬರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಅಪರಿಚಿತ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿದೆ. ಅದರ ಪರಿಣಾಮ ಆ ವ್ಯಕ್ತಿಯು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತಪಟ್ಟ ವ್ಯಕ್ತಿ ನಾರಾಯಣ ಎಂದು ತಿಳಿಯಲಾಗಿದೆ. ಪಾದಚಾರಿಗೆ ಅಪರಿಚಿತ ವಾಹನ ಅತೀವೇಗದಲ್ಲಿ ಬಂದು ಢಿಕ್ಕಿ ಹೊಡೆದು ಪರಾರಿಯಾಗಿದ್ದು, ಆದರೆ ಢಿಕ್ಕಿಯಾದ ರಭಸದಲ್ಲಿ ಆ ವ್ಯಕ್ತಿಯ ತಲೆ ನುಜ್ಜುಗುಜ್ಜಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಘಟನೆ ಸ್ಥಳಕ್ಕೆ ಹಿರಿಯಡಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ವಿವರ:
ಅಂಜಾರು ಶೇಡಿಗುರಿಯಲ್ಲಿ ಹಿರಿಯಡಕ ಕಡೆಯಿಂದ ಹೋಗುವಾಗ ರಸ್ತೆಯ ಎಡಬದಿಯಲ್ಲಿ ನಾರಾಯಣರವರ ಮೃತದೇಹ ತಲೆ ನಜ್ಜುಗುಜ್ಜಾದ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದು, ಮಹೇಶ್ ರವರ ತಂದೆ ನಾರಾಯಣ (65) ರವರು ಸಂಜೆ 6:00 ಗಂಟೆಗೆ ಮನೆಯಿಂದ ಹಿರಿಯಡಕ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು,ವಾಪಾಸ್ಸು ಮನೆಗೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಯಾವುದೋ ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ಅತೀವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿ ನಾರಾಯಣರವರಿಗೆ ಢಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು ಅಥವಾ ವಾಹನ ಹರಿದು ತಲೆ ನಜ್ಜುಗುಜ್ಜಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅಪಘಾತ ಪಡಿಸಿದ ವಾಹನದ ಚಾಲಕನು ಸ್ಥಳದಿಂದ ವಾಹನದೊಂದಿಗೆ ಪರಾರಿಯಾಗಿರುತ್ತಾನೆ.

















