ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ನಟಿ ಪೂನಂ ಪಾಂಡೆ: ಕೇಸು ದಾಖಲು

ಮುಂಬೈ: ನಟಿ ಪೂನಂ ಪಾಂಡೆ ಫೆ.2ರಂದು ಕ್ಯಾನ್ಸರ್ ನಿಂದ ಮೃತರಾದರು ಎಂದು ಸುಳ್ಳು ಸುದ್ದಿ ಹರಡಿದ್ದು, ಸ್ವತಃ ಪೂನಂ ಪಾಂಡೆ ಅವರ ಸೋಶಿಯಲ್ ಮೀಡಿಯಾ ಖಾತೆಯಿಂದಲೇ ಬೇಕಿಂಗ್ ನ್ಯೂಸ್ ನೀಡಲಾಗಿತ್ತು. ಆದರೆ ಮರುದಿನ ಇದು ಫೇಕ್ ನ್ಯೂಸ್ ಎಂದು ನಟಿ ಸ್ವತ ಸ್ಪಷ್ಟಪಡಿಸಿದ್ದು, ಕ್ಯಾನ್ಸರ್ ವಿರುದ್ಧ ಮುಂಜಾಗ್ರತೆ ಕೈಗೊಳ್ಳುವಂತೆ ಎಚ್ಚರಿಸಲು ಈ ರೀತಿ ಮಾಡಲಾಗಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿ ಸ್ಪಷ್ಟನೆ ನೀಡಿದ್ದು ಇದೀಗ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ಮುಂಬೈನ ಪತ್ರಕರ್ತರೊಬ್ಬರು ನಟಿ ಪೂನಂ ಪಾಂಡೆ ವಿರುದ್ಧ ದೂರು ದಾಖಲಿಸಿದ್ದು, ನಟಿಯವರ ಸಾವಿನ ಕುರಿತು ಸುಳ್ಳು ಸುದ್ದಿ ಹರಡಲು ಕಾರಣರಾದ ಎಲ್ಲರ ವಿರುದ್ಧವು ಕೇಸು ದಾಖಲಿಸಿ, ಇಂತಹ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.