ಉಡುಪಿ: ಸಾಲಿಗ್ರಾಮ ದೇವಸ್ಥಾನಕ್ಕೆ ಇಂದು ಖ್ಯಾತ ಚಿತ್ರ ನಿರ್ದೇಶಕ ಮತ್ತು ನಟ ಉಪೇಂದ್ರ ಅವರು ಭೇಟಿ ದರ್ಶನ ಮಾಡಿದರು. ತಮ್ಮ ಕುಲದೇವರಾದ ಶ್ರೀಗುರುನರಸಿಂಹ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ ಕೆ. ಎಸ್ ಕಾರಂತರು ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು. ಉಪೇಂದ್ರ ಅವರಿಗೆ ನಿರ್ಮಾಪಕ ಲಹರಿ ವೇಲು ಸಾಥ್ ನೀಡಿದರು. ಆಡಳಿತ ಮಂಡಳಿಯ ಸದಸ್ಯರಾದ ಕೆ. ಅನಂತಪದ್ಮನಾಭ ಐತಾಳ್ ಉಪಸ್ಥಿತರಿದ್ದರು.












