ನವದೆಹಲಿ: ಬಾಲಿವುಡ್ ನಟ ಸಂಜಯ್ ದತ್ ಅಭಿನಯದ ಹಾರರ್ ಕಾಮಿಡಿ ಚಿತ್ರ ‘ದಿ ಭೂತನಿ’ ಏ.18ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ.
ಸಿದ್ಧಾಂತ್ ಸಚ್‌ದೇವ್ ನಿರ್ದೇಶನದ ಈ ಚಿತ್ರದಲ್ಲಿ ಮೌನಿ ರಾಯ್, ಪಲಕ್ ತಿವಾರಿ, ಸನ್ನಿ ಸಿಂಗ್ ಮತ್ತು ಆಸಿಫ್ ಖಾನ್ ಕಾಣಿಸಿಕೊಂಡಿದ್ದಾರೆ.ಸೋಹಮ್ ರಾಕ್‌ಸ್ಟಾರ್ ಎಂಟರ್‌ಟೈನ್‌ಮೆಂಟ್ ಮತ್ತು ತ್ರೀ ಡೈಮೆನ್ಶನ್ ಮೋಶನ್ ಪಿಕ್ಷರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ.
ಯುಟ್ಯೂಬ್‌ನಲ್ಲಿ ವಿಡಿಯೊ ಹಂಚಿಕೊಳ್ಳುವ ಮೂಲಕ ಚಿತ್ರ ಬಿಡುಗಡೆಯ ಬಗ್ಗೆ ನಿರ್ಮಾಪಕರು ಮಾಹಿತಿ ನೀಡಿದ್ದಾರೆ.












