ಶ್ರೀ ಗೋಪಾಲಕೃಷ್ಣ ಮಂದಿರ ಮುಂಡ್ಕಿನಜೆಡ್ಡು: ಆಗಸ್ಟ್ 26 ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ, ಭಜನೆ ಕಾರ್ಯಕ್ರಮ

ಉಡುಪಿ: ಶ್ರೀ ಗೋಪಾಲಕೃಷ್ಣ ಮಂದಿರ, ಮುಂಡ್ಕಿನಜೆಡ್ಡು ಆಗಸ್ಟ್ 26 ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ, ಭಜನೆ ಕಾರ್ಯಕ್ರಮ ಜರುಗಲಿದೆ.

ಆಗಸ್ಟ್ 27 ಮಂಗಳವಾರ ಅಪರಾಹ್ನ ಗಂಟೆ 3.00ರಿಂದ ವಿಟ್ಲ ಪಿಂಡಿ ಪ್ರಯುಕ್ತ ಈ ಕೆಳಗಿನ ವಿವಿಧ ಸ್ಪರ್ಧೆಗಳು ಜರಗಲಿವೆ

ರಸಪ್ರಶ್ನೆ:
ಪ್ರಾಥಮಿಕ ಶಾಲಾ ವಿಭಾಗ
ಪ್ರೌಢ ಶಾಲಾ ವಿಭಾಗ

ಸಂಗೀತ ಕುರ್ಚಿ:
ಪ್ರಾಥಮಿಕ ಬಾಲಕರು
ಪ್ರಾಥಮಿಕ ಬಾಲಕಿಯರು
ಪ್ರೌಢ ಬಾಲಕರು
ಪ್ರೌಢ ಬಾಲಕಿಯರು
ಮಹಿಳೆಯರು
ಪುರುಷರು

ಚಮಚ ಲಿಂಬೆ ಓಟ:
ಮಹಿಳೆಯರ
ಕಿರಿಯ ವಿಭಾಗ (ಪ್ರಾಥಮಿಕ)
ಹಿರಿಯ ವಿಭಾಗ (ಸಾಮಾನ್ಯ)

ಇಡ್ಲಿ ತಿನ್ನುವುದು:
ಪ್ರೌಢ ಶಾಲಾ ಬಾಲಕರು
ಪ್ರೌಢ ಶಾಲಾ ಬಾಲಕಿಯರು
ಮಹಿಳೆಯರು
ಪುರುಷರು

ಆನೆಗೆ ಬಾಲ ಬಿಡಿಸುವುದು:
ಹಿರಿಯ ಪುರುಷರು

ಗೊಂಬೆಗೆ ತಿಲಕ(ಸ್ಟಿಕ್ಕರ್) ಹಚ್ಚುವುದು:
ಹಿರಿಯ ಮಹಿಳೆಯರು

ಪುಲ್ ಅಪ್:
ಪ್ರೌಢ ಶಾಲಾ ವಿಭಾಗ
ಪುರುಷರ ವಿಭಾಗ

ಮೊಸರು ಕುಡಿಕೆ ಒಡೆಯುವುದು:
ಮಕ್ಕಳ ವಿಭಾಗ (ಸಾಮಾನ್ಯ)
ಪುರುಷರ ವಿಭಾಗ
ಮಹಿಳೆಯರ ವಿಭಾಗ

ಹಗ್ಗಜಗ್ಗಾಟ:
ಪುರುಷರ ವಿಭಾಗ

ಈ ಸ್ಪರ್ಧೆಗಳ ಜೊತೆಗೆ ಮುದ್ದುಕೃಷ್ಣ ಅದೃಷ್ಟಶಾಲಿ(ಲಕ್ಕಿ ಪರ್ಸನ್), ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ, ಪ್ರಸಾದ ವಿತರಣೆ ಈ ಎಲ್ಲಾ ಕಾರ್ಯಕ್ರಮಗಳಿಗೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದೆ.