ವಿದ್ಯಾರ್ಹತೆ, ಜವಾಬ್ದಾರಿ ಇಲ್ಲದೆ ಕೈ ತುಂಬಾ ಸಂಬಳ ಪಿಂಚಣಿ ಬೇಕಾ ಸಂಸತ್ತು ಎಸೆಂಬ್ಲಿ ಸದಸ್ಯರಾಗಿ ಬಿಡಿ.ಅಷ್ಟೇ ಸಾಕು:ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

ಉಡುಪಿ:ಸಾಮಾನ್ಯ ಒಬ್ಬ ಸರಕಾರಿ ನೌಕರನಾಗಬೇಕಾದರೆ ಒಂದು ಕನಿಷ್ಠ ವಿದ್ಯಾರ್ಹತೆ ಬೇಕೇ ಬೇಕು.ಸರಕಾರಿ ನೌಕರ ಅಂದ ಮೇಲೆ ಆತನಿಗೊಂದಿಷ್ಟು ಕೆಲಸದ ಜವಾಬ್ದಾರಿ ಶಿಸ್ತು ನಿಯಮ ಸಂಯಮಗಳ ಒಂದು ಚೌಕಟ್ಟುವಿರುತ್ತದೆ.ಆತನಿಗೆ ನೀಡುವ ಸಂಬಳವು ಅಷ್ಟೇ ಅವನ ವಿದ್ಯಾರ್ಹತೆ ಅನುಭವ ಸೇವಾ ಅವಧಿಯನ್ನು ಪರಿಗಣಿಸಿ ನಿರ್ಧರಿಸಲ್ಪಡುತ್ತದೆ.ಆತನ ನಿವೃತ್ತಿಯ ಅನಂತರದ ಪಿಂಚಣಿಯೂ ಅಷ್ಟೇ ಅದು ಕೂಡಾ ಆತನ ಸೇವಾ ಅವಧಿ ಮಾತ್ರವಲ್ಲ ಆತನಿಗೆ ಹೊಸ ಪಿಂಚಣಿ ಬೇಕಾ ಹಳೆ ಪಿಂಚಣಿ ಅನ್ನುವುದಕ್ಕೂ ಸರಕಾರದ ಕಾನೂನಿನ ಚೌಕಟ್ಟು ಇದೆ.

ಒಂದು ವೇಳೆ ಸೇವಾ ನಿವೃತ್ತಿಯಾದ ಕಾಲದಲ್ಲಿ ಆತನ ಮೇಲೆ ಯಾವುದಾದರೂ ಕೇಸು ತಕರಾರು ಇದ್ದರೆ ಆತನ ಪಿಂಚಣಿಗೂ ಖತ್ರಿ ಬೀಳುತ್ತದೆ. ಸರಕಾರಿ ನೌಕರರ ವೇತನ ಪರಿಷ್ಕರಣೆಯಾಗ ಬೇಕಾದರೆ ಅದಕ್ಕಾಗಿಯೇ ಒಂದು ವೇತನ ಆಯೇೂಗ ರಚನೆಯಾಗಬೇಕು. ಅವರ ಸುದೀರ್ಘವಾದ ಅಧ್ಯಯನ ವರದಿ ಸಲ್ಲಿಕೆಯ ಅನಂತರದಲ್ಲಿ ಕೇಂದ್ರದಲ್ಲಿಯಾದರೆ ಸಂಸತ್ತಿನ ಅಥವಾ ರಾಜ್ಯದಲ್ಲಿಯಾದರೆ ಎಸೆಂಬ್ಲಿಯ ಒಪ್ಪಿಗೆಯ ಜೊತೆಗೆ ಆರ್ಥಿಕ ಇಲಾಖೆಯ ಒಪ್ಪಿಗೆಯೂ ಅಗತ್ಯವಿದೆ.ಅಂತೂ ವೇತನ ಪರಿಷ್ಕರಣೆಯಾಗಬೇಕಾದರೆ ಅತೀ ದೊಡ್ಡ ಹೇೂರಾಟವೇ ಮಾಡಬೇಕು.

ಅದೇ ಪಾಪ ಬೆಳಿಗ್ಗೆಯಿಂದ ಸಂಜೆಯ ತನಕ ದುಡಿಯುವ ಆಶಾ ಕಾರ್ಯಕರ್ತರಿಗಾಗಲಿ, ಅತಿಥಿ ಶಿಕ್ಷಕರಿಗಾಗಲಿ, ಒಂದು ಸಾವಿರ ರೂಪಾಯಿ ವೇತನ ಹೆಚ್ಚಿಸುವ ವಿಷಯ ಪ್ರಸ್ತಾಪವಾದಾಗ ಇಡಿ ದೇಶದ ರಾಜ್ಯದ ಆರ್ಥಿಕತೆಯೆ ಮುಳುಗಿ ಹೇೂಯಿತು ಅನ್ನುವ ತರದಲ್ಲಿ ಪ್ರಧಾನ ಮಂತ್ರಿಗಳಿಂದ ಹಿಡಿದು ಮುಖ್ಯ ಮಂತ್ರಿಗಳ ತನಕ ಆರ್ಥಿಕ ಇಲಾಖೆಯ ಅಧಿಕಾರಿಗಳಿಂದ ಹಿಡಿದು ಆರ್ಥಿಕ ತಜ್ಞರು ಮಾಧ್ಯಮಗಳು ಇದನ್ನೆ ಪ್ರತಿ ನಿಮಿಷವೂ ಇದನ್ನೆ ಅತಿ ದೊಡ್ಡ ಹೊರೆ ಅನ್ನುವ ತರದಲ್ಲಿ ಚರ್ಚೆ ಮಾಡುವುದು ನೇೂಡ ಬೇಕು.

ಅದೇ ನಮ್ಮ ಶಾಸಕರುಗಳ ಸಂಸದರ ಸಂಬಳ ಪಿಂಚಣಿ ಏಕಾಏಕಿಯಾಗಿ ದುಪ್ಪಟ್ಟು ಮಾಡಿಕೊಂಡಾಗ ಇದಾವುದೇ ನಿಯಮಗಳು ಅಡ್ಡ ಬರುವುದೇ ಇಲ್ಲ.ಯಾಕೆಂದರೆ ಕಾನುಾನು ಮಾಡುವುದು ಜನರಿಂದ ಆಯ್ಕೆಗೊಂಡ ಪ್ರಜಾದೇವರುಗಳು ಅಲ್ವಾ.ಅವರು ತಿಂದು ಉಳಿದು ಬಿಟ್ಟರೆ ಅದನ್ನು ನಾವು ಪ್ರಸಾದವೆಂದು ಸ್ವೀಕರಿಸುವ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ.
ಸದನದ ಸದಸ್ಯರಿಗೆ ಸಂಬಳಕೊಡೇೂಣ ಅವರು ಸದನದೊಳಗೆ ಏನುಕೆಲಸ ಮಾಡುತ್ತಾರೆ ಎಷ್ಟು ಶಿಸ್ತಿನಿಂದ ವರ್ತಿಸುತ್ತಾರೆ ಅನ್ನುವುದಕ್ಕಾದರೂ ಲೆಕ್ಕ ಬೇಡವೆ? ಸದನದೊಳಗೆ ಸುಮ್ಮನೆ ಕುಳಿತು ಕೊಂಡು ದೇಶದ ರಾಜ್ಯದ ಜನರ ಸಮಸ್ಯೆ ಬಗ್ಗೆ ಯಾಗಲಿ ಅಭಿವೃದ್ಧಿ ಕುರಿತಾಗಿ ಗಂಭೀರವಾಗಿ ಚರ್ಚೆ ಮಾಡುತ್ತಾರಾ ಅದೂಕುಡಾ ಶೂನ್ಯವೇ.

ಸದನದೊಳಗೆ ಕೂತುಬರೇ ಹನಿಟ್ರಾಪ್ ಮಧು ಬಲೆ ಹನಿಮೂನ್ ಸಿಡಿ ಆಶ್ಲೀಲ ಚಿತ್ರ.ಕೊನೆಗೂ ಇದೆಲ್ಲ ಮುಗಿದ ಮೇಲೆ ಸದನ ಮುಗಿಯುವ ಹೊತ್ತಿಗೆ ಪಕ್ಷ ಮೀರಿ ಯಾವುದೇ ಚರ್ಚೆ ಗದ್ದಲವಿಲ್ಲದೆ ತಮ್ಮ ವೇತನದ ಹೆಚ್ಚಳಕ್ಕೆ ಅನುಮೇೂದಿಸಿ ಧನ್ಯತಾ ಭಾವದಿಂದ ಕೊನೆಗೂ ಸಭಾಧ್ಯಕ್ಷರನ್ನೆ ಎಳೆದು ಹೊರಗೆ ಹಾಕಿ ವಿಜಯ ಪತಾಕಿ ಹಾರಿಸಿ ಅತ್ಯಂತ ಅನಾಗರಿಕ ವರ್ತನೆಯಲ್ಲಿ ಸದನವನ್ನುಮುಗಿಸಿ ಹೊರಗೆ ಬಂದು ಪ್ರತಿನಿತ್ಯ ಬೀದಿ ಬೀದಿಯಲ್ಲಿ ಜಾತಿ ಮತ ಧರ್ಮ ಭಾಷೆ ಹಿಡಿದುಕೊಂಡು ಜನರನ್ನು ರಾಜ್ಯ ದೇಶವನ್ನು ಒಡೆಯುವ ಕೆಲಸಕ್ಕಾಗಿಯೇ ತಾವಿರುವುದು ಅನ್ನುವ ತರದಲ್ಲಿ ವರ್ತನೆ ಮಾಡುವುದು ನೇೂಡಿದರೆ ಜನಸಾಮಾನ್ಯರು ಕಷ್ಟ ಪಟ್ಟುಸಂಪಾದಿಸಿ ಸರಕಾರಕ್ಕೆ ನೀಡಿದ ತೆರಿಗೆಯಿಂದ ಇಂತಹ ಬಿಳಿ ಆನೆಗಳಿಗೆ ಕೈ ತುಂಬಾ ಸಂಬಳ ಕನಿಷ್ಟ ಒಂದು ವರುಷ ಸದನದಲ್ಲಿ ಕೂತರೂ ಹೊಟ್ಟೆ ತುಬುವಷ್ಟು ಪಿಂಚಣಿ ನೀಡಿ ಅವರ ಹೆಂಡತಿ ಮಕ್ಕಳು ಮರಿಮಕ್ಕಳನ್ನು ಸಾಕುವ ಕೆಲಸವನ್ನು ಮತ ನೀಡಿ ಆಯ್ಕೆ ಮಾಡಿದ ತಪ್ಪಿಗಾಗಿ ಈ ದೇಶದ ಜನಸಾಮಾನ್ಯ ಪ್ರಜೆಗಳಾದ ನಾವು ಮಾಡ ಬೇಕಾಗಿ ಬಂದಿರುವುದು ನಮ್ಮ ಪ್ರಜಾಪ್ರಭುತ್ವದ ದುರಂತವೇ ಸರಿ.

ಇದನ್ನು ಪ್ರಶ್ನೆ ಮಾಡುವ ಧೈರ್ಯ ಮತದಾರರಾದ ನಾವು ಮಾಡದೇ ಇರುವುದು ನಮ್ಮ ಪ್ರಜಾಪ್ರಭುತ್ವದ ಇಂದಿನ ನಿಜವಾದ ಸೇೂಲು ಅನ್ನುವುದು ನಮ್ಮೆಲ್ಲರ ಖಚಿತವಾದ ಅಭಿಪ್ರಾಯ ಎಂದು ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ ಇವರು ಹೇಳಿದ್ದಾರೆ.