ಇಂದಿನ ದಿನಮಾನದಲ್ಲಿ ಸೌಂದರ್ಯ ಮತ್ತು ನಮ್ಮ ದೇಹದ ಆರೋಗ್ಯಕ್ಕೆ ಪ್ರತಿಯೊಬ್ಬರೂ ಮಹತ್ವ ನೀಡುತ್ತಿದ್ದಾರೆ. ಇದು ಇಂದಿನ ಅಗತ್ಯತೆ ಕೂಡಾ ಹೌದು. ಈ ನಿಟ್ಟಿನಲ್ಲಿ ಸೌಂದರ್ಯ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಮಣಿಪಾಲಿನ ಒರೇನ್ ಇಂಟರ್ನ್ಯಾಷನಲ್ ಸಂಸ್ಥೆಗೆ ಇದೀಗ ಇಪ್ಪತ್ತೆದು ವರ್ಷದ ಸಂಭ್ರಮ.
ಈ ಪ್ರಯುಕ್ತ ಮೆಹಂದಿ ಕಲಾವಿದರಿಗೆ, ಕಲಾವಿದರಾಗಲು ಆಸಕ್ತಿ ಹೊಂದಿರುವವರಿಗೆ ಸುವರ್ಣಾವಕಾಶ ನೀಡುತ್ತಿದೆ ಈ ಸಂಸ್ಥೆ. ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ(MSDC) ಸಹಯೋಗದಲ್ಲಿ ಸ್ಕಾಲರ್ ಶಿಪ್ ಆಫರ್ ಇದ್ದು, “ಮೆಹಂದಿ ವಿನ್ಯಾಸದ ಡಿಪ್ಲೋಮೋ ಕೋರ್ಸ್” ಬಹಳ ಸಮಂಜಸವಾದ ಬೆಲೆಗೆ ದೊರೆಯುತ್ತಿದೆ.
ಕೋರ್ಸ್ ನ ವಿಶೇಷತೆಗಳು
ಈ ಕೋರ್ಸ್ ನಲ್ಲಿ ಮೆಹಂದಿ ತಯಾರಿಸುವ ಪರಿಣಾಮಕಾರಿ ವಿಧಾನ, ಕೋನ್ ತಯಾರಿಸುವುದು, ಮೆಹಂದಿ ಹಾಕುವ ವಿಧಾನಗಳು, 7 ವಿಭಿನ್ನ ರೀತಿಯ ವಧುವಿಗೆ ಹಾಕಬಹುದಾದ ಹಾಗೂ ವಿಶಿಷ್ಟ ಸಂದರ್ಭಗಳಲ್ಲಿ ಹಾಕಬಹುದಾದ ಮೆಹಂದಿ ಡಿಸೈನ್ ಗಳನ್ನು ಹೇಳಿಕೊಡಲಾಗುತ್ತದೆ. ಇದಲ್ಲದೇ ಕಲಾವಿದರು ಸ್ವತಂತ್ರವಾಗಿ ಮೆಹಂದಿ ಬ್ಯುಸಿನೆಸ್ ಆರಂಭಿಸಲು ಬೇಕಾಗುವ ಕೌಶಲ್ಯಗಳನ್ನು ತಿಳಿಸಿ ಸ್ವತಂತ್ರರಾಗಿ ದುಡಿಯಲು ಪ್ರೋತ್ಸಾಹ ನೀಡಲಾಗುತ್ತದೆ.
ತಡ ಮಾಡದೇ ಕೂಡಲೇ ಬನ್ನಿ..
ಈ ಕೋರ್ಸ್ ಮುಗಿಯುವ ಹೊತ್ತಿಗೆ ನಿಮಗೆ ಮೆಹಂದು ವಿನ್ಯಾಸದಲ್ಲಿ ಡಿಪ್ಲೋಮೋ ಸರ್ಟಿಫಿಕೇಟ್ ದೊರೆಯುತ್ತದೆ ಅಲ್ಲದೇ, ಈ ಕ್ಷೇತ್ರದಲ್ಲಿ ನೀವು ಖಂಡಿತವಾಗಿ ಪರಿಣಿತಿ ಹೊಂದಬಹುದಾಗಿದೆ. ಹಾಗೇ ನಿಮ್ಮ ಸ್ವಂತ ವ್ಯವಹಾರ ಪ್ರಾರಂಭಿಸಲು ಧೈರ್ಯವೂ ಬಂದಿರುತ್ತದೆ.
ಒಂದು ತಿಂಗಳ ಈ ಕೋರ್ಸ್ ನ ವಾಸ್ತವ ಬೆಲೆ 14,333 ರೂಪಾಯಿಗಳು. ಆದರೆ ತನ್ನ ರಜತ ಸಂಭ್ರಮದ ಈ ಸುಸಂದರ್ಭದಲ್ಲಿ ಒರೇನ್ ಇಂಟರ್ನ್ಯಾಷನಲ್ ಸಂಸ್ಥೆ ಈ ಕೋರ್ಸನ್ನು ಕೇವಲ 9,408 ಬೆಲೆಗೆ ನೀಡುತ್ತಿದೆ. ಈ ಆಫರ್ ಕೇವಲ ಡಿಸೆಂಬರ್ 31, 2024 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಹಾಗಾಗಿ ಮೆಹಂದಿ ಕಲೆಯ ಆಸಕ್ತರು ನೀವಾಗಿದ್ದರೆ ಅಥವಾ ನಿಮ್ಮ ಪರಿಚಿತರು ಯಾರಾದರೂ ಇದ್ದರೆ ಖಂಡಿತಾ ತಪ್ಪಿಸಿಕೊಳ್ಳಬೇಡಿ ಈಗಲೇ ನಿರ್ಧಾರ ಮಾಡಿ ಕೋರ್ಸ್ ಗೆ ಹೆಸರು ನೋದಾಯಿಸಿಕೊಳ್ಳಿರಿ.
ಹೆಚ್ಚಿನ ಮಾಹಿತಿಗೆ ಓರೇನ್ ಇಂಟರ್ನ್ಯಾಷನಲ್, MSDC ಕಟ್ಟಡ, 3 ನೇ ಮಹಡಿ, ಈಶ್ವರನಗರ, ಮಣಿಪಾಲ ಇಲ್ಲಿಗೆ ಭೇಟಿ ನೀಡಿ ಅಥವಾ ಈ ನಂಬರ್ ಗೆ ಕರೆ ಮಾಡಿ. 8123165068, 8123163935












