ಮಾಂಟೆಸ್ಸರಿ / ನರ್ಸರಿ ಟೀಚರ್ಸ್‍ ಟ್ರೈನಿಂಗ್ ಕೋರ್ಸ್’ಗೆ ಪ್ರವೇಶಾರಂಭ

ಉಡುಪಿ/ಮಣಿಪಾಲ: ಕಳೆದ 12 ವರ್ಷಗಳಿಂದ ಕಾರ್ಯಚರಿಸುವ ‘ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್’ ಮಹಿಳೆಯರಿಗೆ ಒಂದು ವರ್ಷದ ಮಾಂಟೆಸ್ಸರಿ / ನರ್ಸರಿ ಟೀಚರ್ಸ್ ಟ್ರೈನಿಂಗ್ ನಡೆಸುತ್ತಿದೆ. ಭಾರತ ಸರಕಾರದ ನಿರುದ್ಯೋಗ ನಿರ್ಮೂಲನ ಸಂಸ್ಥೆಯಾದ ಭಾರತ್ ಸೇವಕ್ ಸಮಾಜದ ಆಶ್ರಯದಲ್ಲಿ ನಡೆಸಲ್ಪಡುವ ಈ ಕೋರ್ಸಿಗೆ ಪ್ರವೇಶಾತಿ ಆರಂಭವಾಗಿದ್ದು, ಪಿಯುಸಿ ಮತ್ತು ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿದ ಮಹಿಳಾ ಆಭ್ಯರ್ಥಿಗಳು ಈ ತರಬೇತಿಯ ಪ್ರಯೋಜನೆ ಪಡೆದುಕೊಳ್ಳಬಹುದು. ಕಳೆದ ಸಾಲಿನಲ್ಲಿ ತರಬೇತಿ ಹೊಂದಿದ ಈ ಸಂಸ್ಥೆಯ ಎಲ್ಲಾ ಪ್ರಶಿಕ್ಷಿತ ಶಿಕ್ಷಿಯರಿಗೆ ಉದ್ಯೋಗ ಲಭಿಸಿದೆ. 2024-25ರ ಪ್ರವೇಶಾತಿ ಆರಂಭವಾಗಿದ್ದು ಆಸಕ್ತರು ಸಂಸ್ಥೆಯಿಂದ ಅರ್ಜಿ ನಮೂನೆ ಪಡೆದು ಶ್ರೀ ಶಾರದಾ ಟೀಚರ್ ಟ್ರೈನಿಂಗ್, ಡಿ.ಸಿ.ಆಫೀಸ್ ಬಳಿ, ಕ್ರಿಸ್ಟಲ್ ಬಿಜ್ಹ್ ಹಬ್, 1ನೇ ಮಹಡಿಯಲ್ಲಿರುವ ಸಂಸ್ಥೆ (9901722527)ಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿರುತ್ತದೆ.