ಮಲ್ಪೆ: ಮಲ್ಪೆ ಬೀಚ್ ಬಳಿಯ ಹೋಟೆಲೊಂದರಲ್ಲಿ ರಾತ್ರಿ ವೇಳೆ ಅಗ್ನಿ ಅವಘಡ ಸಂಭವಿಸಿದ್ದು ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.ಸಚಿನ್ ಎಂಬವರಿಗೆ ಸೇರಿದ ಅಮ್ಮ ಹೋಟೆಲ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ.
ರಾತ್ರಿ ಎಂದುನಂತೆ ಸಿಬ್ಬಂದಿ ಹೋಟೆಲ್ ಬಂದ್ ಮಾಡಿ ಹೋದ ನಂತರ ಫ್ರಿಜ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ ಎನ್ನಲಾಗಿದೆ.ತಕ್ಷಣ ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಸಲಾಯಿತಾದರೂ ಈ ವೇಳೆಗಾಗಲೇ ಹೊಟೇಲಿನ ಒಳಗಿದ್ದ
ಐದಾರು ಫ್ರಿಡ್ಜ್, ಗ್ರೈಂಡರ್, ಪಾತ್ರೆ, ದಿನಸಿ ವಸ್ತುಗಳು ಬೆಂಕಿಗಾಹುತಿಯಾಗಿತ್ತು.ಅಗ್ನಿ ಅವಘಡದಲ್ಲಿ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ ಎಂದು ಅಂದಾಜಿಸಲಾಗಿದೆ.ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.












