ಮಲ್ಪೆ: ಯುವಕ ನಾಪತ್ತೆ

ಮಲ್ಪೆ: ಕಿನ್ನಿಮೂಲ್ಕಿ ವಾಟರ್‌ ಸರ್ವಿಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಗೌತಮ್‌ (31) ಆ.18ರಂದು ಬೆಳಿಗ್ಗೆ 9:30 ಗಂಟೆಗೆ ಮನೆಗೆ ಬಂದಿದ್ದು ಬಳಿಕ ಬೆಳಿಗ್ಗೆ 10:00 ಗಂಟೆಗೆ ಮನೆಯಿಂದ ಹೊರಗೆ ಹೋಗಿರುತ್ತಾನೆ.

ಈತ ಆ.19 ರಂದು ಬೆಳಿಗ್ಗೆ 08:30 ಗಂಟೆಗೆ ಕನ್ನರಪಾಡಿ ಗೋಪುರದ ಹತ್ತಿರವಿರುವ ಹೋಟೆಲ್‌ ಬಳಿ ಇರುವುದನ್ನು ತಾಯಿ ನೋಡಿರುತ್ತಾರೆ. ಬಳಿಕ ಸಂಬಂಧಿಕರ ಮನೆಗೂ ಹೋಗದೆ ಮನೆಗೂ ಬಾರದೆ ಕಾಣೆಯಾಗಿರುತ್ತಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.