ಉಡುಪಿ: ಮಲ್ಪೆಯಲ್ಲಿ ಮೀನುಗಾರರಿಗೆ ಬೃಹತ್ ಗಾತ್ರದ ಮೀನೊಂದು ಸಿಕ್ಕಿದ್ದು, ಬರೋಬ್ಬರಿ 400kg ತೂಕವನ್ನು ಹೊಂದಿದೆ. ಮಲ್ಪೆಯ ಬಲರಾಂ ಪರ್ಸೀನ್ ಬೋಟಿನವರ ಬಲೆಗೆ ಈ ಬೃಹತ್ ಗಾತ್ರದ ಮೀನು ದೊರೆತಿದೆ.
ಈ ಮೀನಿನ ಸಾಮಾನ್ಯ ಹೆಸರು ಬಿಲ್ಫಿಶ್ ಎಂದೂ, ಸ್ಥಳೀಯವಾಗಿ ಮಡಲು ಮೀನು ಅಥವಾ ಕಟ್ಟೆಕೊಂಬು ಮೀನು ಎಂದೂ ಕರೆಯಲಾಗುತ್ತದೆ. ಇದು ಸಣ್ಣ ಗಾತ್ರದಲ್ಲಿ ಸಾಮಾನ್ಯವಾಗಿ ಸಿಗುತ್ತಿರುತ್ತದೆ.
ಅಪರೂಪವಾಗಿ ಬೃಹತ್ ಗಾತ್ರದಲ್ಲಿ ಈ ಮೀನು ಸಿಕ್ಕಿದೆ. ಸಣ್ಣ ಮಡಲು ಮೀನಿಗೆ ಇರುವಷ್ಟು ಬೆಲೆ ದೊಡ್ಡ ಮೀನಿಗೆ ಇರುವುದಿಲ್ಲ ಎಂದು ಮಲ್ಪೆ ಕನ್ನಿ ಮೀನುಗಾರ ಸಂಘದ ಅಧ್ಯಕ್ಷ ದಯಕರ ವಿ.ಸುವರ್ಣ ಮಾಹಿತಿ ನೀಡಿದ್ದಾರೆ.