ಮಣಿಪಾಲ: ಶಿವಳ್ಳಿ ಗ್ರಾಮದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಸರ ಕದ್ದ ಕುರಿತು ಮಣಿಪಾಲ ಪೊಲೀಸ್ ಠಾಣೆಹಳ್ಳಿ ಪ್ರಕರಣ ದಾಖಲಾಗಿದೆ.
ಸೆಪ್ಟೆಂಬರ್ 3 ರಂದು ಬೆಳಿಗ್ಗೆ ಕಮಲ (70), ಶಿವಳ್ಳಿ ಗ್ರಾಮ, ಉಡುಪಿ ಇವರು ತನ್ನ ಅಣ್ಣನ ಮನೆಗೆ ಹೋಗಲಿ ಬಗ್ಗೆ ಮನೆಯಿಂದ ಹೊರಟಿದ್ದು ಬೆಳಿಗ್ಗೆ 11 ಗಂಟೆಗೆ ಶಿವಳ್ಳಿ ಗ್ರಾಮದ ಸಗ್ರಿನೋಳೆ ತಿರುಮಲ ಕೋಳಿ ಫಾರಂನ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ವ್ಯಕ್ತಿ ಓರ್ವ ಹಿಂದಿನಿಂದ ಬಂದು ಅವರ ಕುತ್ತಿಗೆಯಲ್ಲಿದ್ದ ಸರ ಕದ್ದು ಪರಾರಿಯಾಗಿದ್ದಾನೆ.
ದೂರಿನ ಪ್ರಕಾರ 16 ಗ್ರಾಂ ತೂಕದ ಚಿನ್ನದ ಚೈನ್ ನ್ನು ಎಳೆದು ಸುಲಿಗೆ ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.