ಮಂಗಳೂರು: ಕಾಲೇಜು ವಿದ್ಯಾರ್ಥಿನಿ ಒಬ್ಬರು ಮನೆಯಿಂದ ನಾಪತ್ತೆ ಯಾಗಿರುವ ಘಟನೆ ಬೋಳಾರದಲ್ಲಿ ನಡೆದಿದೆ.
ಬೋಳಾರ ಎಮ್ಮೆಕೆರೆಯ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದ ಮೆಹರ್ ಬಾನು (18). ಮಂಗಳೂರಿನ ಕೊಡಿಯಾಲಬೈಲ್ನ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ಕಲಿಯುತ್ತಿದ್ದು, ಅವರು 10 ದಿನಗಳಿಂದ ಕಾಲೇಜಿಗೆ ಹೋಗದೆ ಮನೆಯಲ್ಲಿದ್ದರು.
ಅ. 24ರಂದು ಸಂಜೆ 4 ಗಂಟೆಗೆ ತಾಯಿ ಹೊರಗೆ ಹೋಗಿದ್ದು, 6 ಗಂಟೆಗೆ ವಾಪಸು ಬಂದು ನೋಡಿದಾಗ ಮಗಳು ಮನೆಯಲ್ಲಿ ಇರಲಿಲ್ಲ. ಈ ಬಗ್ಗೆ ಎಲ್ಲ ಕಡೆ ವಿಚಾರಿಸಿದ್ದು, ಎಲ್ಲಿಯೂ ಪತ್ತೆಯಾಗಿಲ್ಲ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.