ಬೈಂದೂರು: ವಾಂತಿಬೇಧಿಯಿಂದ ಅಸ್ವಸ್ಥಗೊಂಡ 4 ತಿಂಗಳ ಮಗು ಮೃತ್ಯು.

ಉಡುಪಿ: ಬೈಂದೂರು ತಾಲೂಕಿನ ನಾಗರಮಕ್ಕಿ ಎಂಬಲ್ಲಿ ಮಗುವೊಂದು ವಾಂತಿ ಬೇಧಿಯಿಂದ ತೀವ್ರವಾಗಿ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ನ.8ರಂದು ಬೆಳಗ್ಗೆ ನಡೆದಿದೆ.

ನಾಗರಮಕ್ಕಿಯ ಸಾಧು ಎಂಬವರ ಗಂಡು ಮಗು ಹರ್ಷಿತ್ (4 ತಿಂಗಳು 2ದಿನ) ಮೃತ ದುದೈರ್ವಿ.

ಮಗುವಿಗೆ ಎರಡು ದಿನಗಳ ಹಿಂದೆ ಜ್ವರ ಕಾಣಿಸಿ ಕೊಂಡಿದ್ದು ಬೈಂದೂರಿನ ಮಕ್ಕಳ ತಜ್ಞರರಲ್ಲಿ ಔಷದ ಉಪಚಾರ ಮಾಡಿಸ ಲಾಗಿತ್ತು ಎನ್ನಲಾಗಿದೆ. ರಾತ್ರಿ ವೇಳೆ ಮಗು ಮನೆಯಲ್ಲಿ ವಾಂತಿ ಭೇದಿ ಮಾಡಿ ಅಸ್ವಸ್ಥಗೊಂಡಿದ್ದು ಚಿಕಿತ್ಸೆಗಾಗಿ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟಿತ್ತೆನ್ನಲಾಗಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.