ಬೈಂದೂರು: ಇಂದು (ಜುಲೈ 4) ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ.

ಉಡುಪಿ: ಭಾರೀ ಗಾಳಿಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಬೈಂದೂರು ವಲಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜು.4ರ ಗುರುವಾರ ರಜೆ ಘೋಷಿಸಲಾಗಿದೆ.

ಗಾಳಿ-ಮಳೆ ಹೆಚ್ಚಿರುವ ಕಾರಣ ಮುಂಜಾಗೃತ ಕ್ರಮವಾಗಿ, ಜಿಲ್ಲಾಧಿಕಾರಿಗಳು ಸೂಚನೆಯಂತೆ ರಜೆ ನೀಡಲಾಗಿದೆ ಎಂದು ಬೈಂದೂರು ಬಿಇಒ ತಿಳಿಸಿದ್ದಾರೆ.
ಉಡುಪಿಯ ಇತರ ವಿಭಾಗಗಳಲ್ಲಿ ಎಂದಿನಂತೆ ತರಗತಿ ನಡೆಯಲಿವೆ.