ಬಿಗ್‌ ಬಾಸ್‌ ಮನೆಗೆ ಸೀಸನ್10ರ ಸ್ಪರ್ಧಿಗಳಾದ ಡ್ರೋನ್ ಪ್ರತಾಪ್‌, ತನಿಷಾ ಎಂಟ್ರಿ… ಜೊತೆಯಾದ ಸಂತು -ಪಂತು ಜೋಡಿ

ಬೆಂಗಳೂರು: ಬಿಗ್‌ ಬಾಸ್‌ ಮನೆಯಲ್ಲಿ ಕಳೆದ ವಾರ ಯಾವುದೇ ಎಲಿಮಿನೇಷನ್‌ ಆಗಿಲ್ಲ. ಆ ಮೂಲಕ ಡೇಂಜರ್‌ ಝೋನ್‌ನಲ್ಲಿದ್ದ ಸ್ಪರ್ಧಿಗಳಿಗೆ ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳೋಕೆ ಮತ್ತೊಂದು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

ಚೈತ್ರಾ ಅವರನ್ನು ಕೆಲಕಾಲ ಕನ್ಫೆಷನ್‌ ರೂಮ್‌ನಲ್ಲಿ ಕೂರಿಸಿ ಆ ಬಳಿಕ ಮನೆಯೊಳಗೆ ಕರೆಸಿಕೊಳ್ಳಲಾಗುತ್ತದೆ. ಎಲಿಮಿನೇಷನ್‌ ಇಲ್ಲದೆ ಕಳೆದ ವಾರ ಸಾಗಿದೆ.ಈ ವಾರದ ಆರಂಭಿಕ ದಿನದಲ್ಲಿ ಬಿಗ್‌ ಬಾಸ್‌ ಮನೆಗೆ ಕಳೆದ ಸೀಸನ್‌ನಲ್ಲಿ ಗಮನ ಸೆಳೆದ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ.

ತನಿಷಾ, ಡ್ರೋನ್‌ ಪ್ರತಾಪ್‌, ತುಕಾಲಿ ಸಂತೋಷ್‌ ಹಾಗೂ ವರ್ತೂರು ಸಂತೋಷ್‌ ಅವರು ಬಿಗ್‌ ಬಾಸ್‌ ಮನೆಗೆ ಅತಿಥಿಗಳಾಗಿ ಬಂದಿದ್ದಾರೆ.ತನಿಷಾ ಅವರ ಜತೆ ಹನುಮಂತು ʼಚುಟು ಚುಟು ಅಂತೈತಿ ಸಾಂಗ್ʼ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.‌ ತುಕಾಲಿ ಸಂತು ಅವರ ಬೆನ್ನಿಗೆ ಹತ್ತಿ ಮಾವ ಎಂದು ಹನುಮಂತು ಕೊಂಡಾಡಿದ್ದಾರೆ. ʼʼಮಾವ ಮಾವ ಅಂಥ ಮಾನಸನನ್ನೇ ಕಳಿಸಿ ಬಿಟ್ಟಿಯಲ್ಲ” ಎಂದು ತುಕಾಲಿ ತಮಾಷೆಯಾಗಿ ಹೇಳಿದ್ದಾರೆ.ಕಳೆದ ಸೀಸನ್‌ನಲ್ಲಿ ಸಂತು – ಪಂತು ಆಗಿ ಗಮನ ಸೆಳೆದಿದ್ದ ವರ್ತೂರು – ತುಕಾಲಿ ಅವರು ಮತ್ತೆ ಜೊತೆಯಾಗಿದ್ದಾರೆ.

ಪ್ರತಾಪ್‌ ಅವರಿಗೆ ಚೈತ್ರಾ ಅವರು ಪ್ರತಾಪ್‌ ಅಣ್ಣಾ ಅಂಥ ಕರೆದಿದ್ದಾರೆ. ಇದಕ್ಕೆ ಚೈತ್ರಾಕ್ಕ ಅಣ್ಣ ಅಂತೆಲ್ಲ ಕರೆಯಬೇಡಿ ಎಂದಿದ್ದಾರೆ.

ಈ ಸಂಚಿಕೆ ಇಂದು (ಡಿ.9ರಂದು) ರಾತ್ರಿ ಪ್ರಸಾರವಾಗಲಿದೆ.