ಉಡುಪಿ: ಕರಾವಳಿ ಕಾವಲು ಪಡೆಯ ಬೋಟ್ ಗಳು ಮತ್ತು ವಾಹನಗಳಿಗೆ ಸರಕಾರ ಇಂಧನ ಕಡಿತ ಮಾಡಿದೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣ , ಭದ್ರತೆ ,ಸುರಕ್ಷತೆಯ ವಿಚಾರದಲ್ಲಿ ಸರಕಾರ ರಾಜಿಯಾಗಬಾರದು. ಬಜೆಟ್ ನಲ್ಲಿ ಕರಾವಳಿ ಕಾವಲು ಪಡೆಗೆ ಅಗತ್ಯ ಅನುದಾನ ಮಂಜೂರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಎಲ್ಲರಿಗೂ ಗೊತ್ತಿದೆ.ಅಭಿವೃದ್ಧಿ ಚಟುವಟಿಕೆಗಳಿಗೆ ಮತ್ತು ಮಳೆ ಹಾನಿಗೆ ಯಾವುದಕ್ಕೂ ಅನುದಾನ ಬಂದಿಲ್ಲ.ಕಡಲು ಕೊರೆತಕ್ಕೂ ಸರಕಾರ ಅನುದಾನ ಕೊಟ್ಟಿಲ್ಲ. ಜನಪರವಾಗಿ ಸ್ಪಂದಿಸುವ ಶಕ್ತಿ ಈ ಸರ್ಕಾರಕ್ಕೆ ಇಲ್ಲ.ಕರಾವಳಿ ಕಾವಲು ಪಡೆ ನಮ್ಮ ಗಡಿಯನ್ನು ಕಾಯುತ್ತದೆ. ಕೇವಲ ಜವಾಬ್ದಾರಿ ಕೊಟ್ಟರೆ ಸಾಲದು, ವ್ಯವಸ್ಥೆ ಕಲ್ಪಿಸಬೇಕು. ರಕ್ಷಣೆಗೆ ಬೇಕಾದ ಪರಿಹಾರಗಳನ್ನು ಸರ್ಕಾರ ವ್ಯವಸ್ಥೆ ಮಾಡಬೇಕು. ಮೂರು ಜಿಲ್ಲೆಗಳಲ್ಲಿ ಕಾರ್ಯಾಚರಿಸುವ ಕರಾವಳಿ ಕಾವಲು ಪಡೆಗೆ ಸರಕಾರ ಹೆಚ್ಚಿನ ಅನುದಾನ ನೀಡಬೇಕು.ಗಡಿ ರಕ್ಷಣೆಗೆ ಸಂಬಂಧಪಟ್ಟ ಹಾಗೆ ಬಜೆಟ್ ನಲ್ಲಿ ಸರಕಾರ ಉತ್ತಮ ಅನುದಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.












