ಬಂಟಕಲ್:“ಒರಕಲ್ ಅಪೆಕ್ಸ್ ಮತ್ತು ಎಲ್‌ಎಲ್‌ಎಂಎಸ್ ಬಳಸಿಕೊಂಡು ಸ್ಮಾರ್ಟ್ ಸಂವದಾತ್ಮಕ ಚಾಟ್‌ಬಾಟ್” ಎಂಬ ವಿಷಯದ ಕುರಿತು ಪ್ರಾಯೋಗಿಕ ಕಾರ್ಯಾಗಾರ

ಬಂಟಕಲ್:ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಐಇಇಇ ವಿದ್ಯಾರ್ಥಿ ಘಟಕ
ಮತ್ತು ಮಹಿಳಾ ಸಬಲೀಕರಣ ಕೋಶವು ಅನನ್ಯ ಪೌಂಡೇಶನ್‌ನ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಮಹಿಳಾ ಮಾಹಿತಿ ಸಂವಹನ ತಂತ್ರಜ್ಞಾನ ದಿನದ ಅಂಗವಾಗಿ ದಿನಾಂಕ 24 ಎಪ್ರಿಲ್ 2025 ರಂದು “ಒರಕಲ್
ಅಪೆಕ್ಸ್ ಮತ್ತು ಎಲ್‌ಎಲ್‌ಎಂಎಸ್ ಬಳಸಿಕೊಂಡು ಸ್ಮಾರ್ಟ್ ಸಂವದಾತ್ಮಕ ಚಾಟ್‌ಬಾಟ್” ಎಂಬ ವಿಷದ ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಜಪಾನ್ ಮತ್ತು ಏಷ್ಯಾ ಪೆಸಿಪಿಕ್‌ನ ಒರಾಕಲ್ ಸೊಲ್ಯೂಷನ್ ಎಂಜಿನಿಯರಿಂಗ್ ಹಬ್ – ಟೆಕ್ನಾಲಜಿಯ ಅನಾಲಿಟಿಕ್ಸ್ ಎಂಜಿನಿಯರ್ ನಿವೇದಿತ ಬಿ ಭಟ್ ಮತ್ತು ಕ್ಲೌಡ್
ಸೊಲ್ಯೂಷನ್ ಎಂಜಿನಿಯರ್ ವಿದಿಶಾ ಶೇಟ್ ಈ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಈ ಕಾರ್ಯಾಗಾರದಲ್ಲಿ ಬ್ರೌಸರ್, ಒರಾಕಲ್ ರೆಸ್ಟ್ ಡೇಟಾ ಸೇವೆಗಳು, ಒರಾಕಲ್ ಡೇಟಾ ಬೇಸ್ ಸೇರಿದಂತೆ ಅಪೆಕ್ಸ್ನ ಅಪ್ಲಿಕೇಶನ್ ಮತ್ತು ವಾಸ್ತುಶಿಲ್ಪವನ್ನು ನಿರ್ಮಿಸಲು ಅಪೆಕ್ಸ್- ಲೋ ಕೋಡ್ ಅಭಿವೃದ್ಧಿಯ ಬಗ್ಗೆ ಮಾಹಿತಿ ನೀಡಿದರು.

ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಮ್ಮದೇ
ಆದ ಚಾಟ್‌ಬಾಟ್ ಅನ್ನು ರಚಿಸಲು ಕಲಿತರು. ತ್ವರಿತ ವೆಬ್ ಅಪ್ಲಿಕೇಶನ್ ಅಭಿವೃದ್ಧಿಗಾಗಿ ಪ್ರಬಲ ಸಾಧನವಾದ ಒರಾಕಲ್ ಅಪೆಕ್ಸ್ ಅನ್ನು ಬಳಸಿಕೊಂಡು, ಆಲೋಚನೆಗಳನ್ನು ಎಷ್ಟು ಸುಲಭವಾಗಿ ಕೆಲಸ ಮಾಡುವಂತೆ ಪರಿವರ್ತಿಸಬಹುದಾದ ವಿಧಾನಗಳನ್ನು ತಿಳಿದುಕೊಂಡರು.

ಗಣಕಯಂತ್ರ ವಿಭಾಗದ ವಿದ್ಯಾರ್ಥಿನಿಯಾದ ಚಿತ್ಕಲಾ
ಕಾರ್ಯಕ್ರಮವನ್ನು ನಿರೂಪಿಸಿದರು. ಮಹಿಳಾ ಸಬಲೀಕರಣ ಕೋಶದ ಸಂಯೋಜಕಿಯಾದ ಡಾ. ಲೊಲಿಟಾ ಪ್ರಿಯಾ ಕ್ಯಾಸ್ತಲಿನೊ ಮತ್ತು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತು ಮೇಶಿನ್ ಲರ್ನಿಂಗ್ ವಿಭಾಗದ ಮುಖ್ಯಸ್ಥೆಯಾದ ಡಾ. ಮಮತಾ ಇವರು ಅತಿಥಿಗಳನ್ನು ಸ್ವಾಗತಿಸಿದರು.

ಈ ಕಾರ್ಯಾಗಾರದಲ್ಲಿ ಸಂಸ್ಥೆಯ ಉಪ ಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್ ಮತ್ತಿ ಐಇಇಇ ಘಟಕದ ಸಂಯೋಜಕರಾದ ಡಾ. ಸದಾನಂದ ಎಲ್ ಉಪಸ್ಥಿತರಿದ್ದರು.