ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ “ಯಕ್ಷಸಿಂಚನ” ಯಕ್ಷಗಾನ ತಂಡವು ದಿನಾಂಕ 22 ಮತ್ತು 23 ಮಾರ್ಚ್ 2025 ರಂದು ಶ್ರೀ
ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು
ಮಂಗಳೂರು, ಇಲ್ಲಿ ನಡೆದ “ಯಕ್ಷೋತ್ಸವ 2025”
ಯಕ್ಷಗಾನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನಗಳಿಸಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಕಾಲೇಜಿನ
ಒಟ್ಟು ಹತ್ತು ತಂಡಗಳು ಭಾಗವಹಿಸಿದ್ದವು. ನಮ್ಮ
ವಿದ್ಯಾರ್ಥಿಗಳ ತಂಡವು “ಸುದರ್ಶನ ವಿಜಯ” ಎಂಬ
ಪ್ರಸಂಗವನ್ನು ಈ ಸ್ಪರ್ಧೆಯಲ್ಲಿ ಯಕ್ಷ ಗುರುಗಳಾದ
ಶ್ರೀ ರಾಕೇಶ್ ರೈ ಅಡ್ಕ ಇವರ ಮಾರ್ಗದರ್ಶನದಲ್ಲಿ
ಪ್ರದರ್ಶಿಸಿದರು. ತೆಂಕುತಿಟ್ಟಿನ ಹೆಸರಾಂತ ಯಕ್ಷಗಾನ
ಕಲಾವಿದರು ಈ ಸ್ಪರ್ಧೆಯ ಮೌಲ್ಯಮಾಪನ ನಡೆಸಿದ್ದರು.
ಈ ಸ್ಪರ್ಧೆಯಲ್ಲಿ ವೈಯಕ್ತಿಕವಾಗಿ ಶ್ರೀಶ ಇವರ ಸ್ತ್ರೀ
ವೇಷಕ್ಕೆ ಹಾಗೂ ವಿಧಿಶ ನೆಲ್ಲಿ ಇವರ ಶತ್ರು ಪ್ರಸೂದನ
ವೇಷಕ್ಕೆ ದ್ವಿತೀಯ ಬಹುಮಾನ ದೊರಕಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ,
ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಹರ್ಷ
ವ್ಯಕ್ತಪಡಿಸಿರುತ್ತಾರೆ.












