ನೇಶನಲ್ ಐ.ಟಿ.ಐ ಬಾರ್ಕೂರು ಓರಿಯಂಟೇಶನ್ ಕಾರ್ಯಕ್ರಮ

ಬಾರ್ಕೂರು: ದಿ. ಬಾರ್ಕೂರು ಎಜುಕೇಶನಲ್ ಸೊಸೈಟಿ(ರಿ) ಬಾರ್ಕೂರು ಇದರ ಆಡಳಿತಕ್ಕೆ ಒಳಪಟ್ಟಂತಹ ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ ಜರುಗಿತು.

ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಬಿ. ಶಾಂತರಾಮ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಐ ಟಿ ಐ ತರಬೇತಿಯ ಮಹತ್ವ ಮತ್ತು ಐ ಟಿ ಐ ತರಬೇತಿ ನಂತರ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳು ಕೋರ್ಸ್ ಮುಗಿಸಿದ ತಕ್ಷಣ ಉದ್ಯೋಗವನ್ನು ಪಡೆಯುವ ಅವಕಾಶದ ಬಗ್ಗೆ ನಮ್ಮ ಸಂಸ್ಥೆಯು ಮಾಡುತ್ತಿರುವ ಶ್ರಮದ ಬಗ್ಗೆ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಈ ಮಾಹಿತಿ ಕಾರ್ಯಾಗಾರದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಯುತ ವೆಂಕಟೇಶ್ ಕ್ರಮಧಾರಿ ಇವರು ಸಂಸ್ಥೆಯಲ್ಲಿನ ತರಬೇತಿಯ ಬಗ್ಗೆ ಮಾಹಿತಿ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಾರ್ಕೂರು ಎಜುಕೇಶನಲ್ ಸೊಸೈಟಿಯ ಉಪಾಧ್ಯಕ್ಷರಾದ ನಿವೃತ್ತ ಪ್ರಾಂಶುಪಾಲ ಶ್ರೀ ಬಿ. ಸೀತಾರಾಮ್ ಶೆಟ್ಟಿ ಹಾಗೂ ಶ್ರೀ ಹೆಚ್. ವಿಠ್ಠಲ್ ಶೆಟ್ಟಿ ಶೇಡಿಕೊಡ್ಲು, ಖಜಾಂಚಿಯಾದ ಶ್ರೀ ಎ. ಕೃಷ್ಣ ಹೆಬ್ಬಾರ್, ಆಡಳಿತಾಧಿಕಾರಿಯಾದ ಶ್ರೀ ಆರ್ಚಿಬಾಲ್ಡ್ ಪುಟಾರ್ಡೋ ಸಂಸ್ಥೆಯ ಸಂಚಾಲಕರಾದ ಶ್ರೀ ಬಿ. ರಾಮಚಂದ್ರ ಕಾಮತ್, ನಮ್ಮ ಸಹಸಂಸ್ಥೆಯಾದ ವಿದ್ಯೇಶ ವಿದ್ಯಾಮಾನ್ಯ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಶ್ರೀ ರಾಜರಾಮ ಶೆಟ್ಟಿ ಇವರು ಉಪಸ್ಥಿತರಿದ್ದರು.

ಕಚೇರಿ ಸಿಬ್ಬಂದಿ ಶ್ರೀ ಹರೀಶ್ ಹೆಬ್ಬಾರ್ ಇವರು ಪ್ರಾರ್ಥನೆಗೈದು, ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಶ್ರೀ ಭಾಸ್ಕರ್ ಉಪಾಧ್ಯ ಸ್ವಾಗತಿಸಿ, ಉಪನ್ಯಾಸಕರಾದ ಶ್ರೀ ನಾಗರಾಜ್ ದೇವಾಡಿಗ ವಂದನಾರ್ಪಣೆಗೈದರು. ಉಪನ್ಯಾಸಕರಾದ ಶ್ರೀ ಮಂಜುನಾಥ ನಾಯ್ಕ್ ಕೆ ಎಂ ಕಾರ್ಯಕ್ರಮ ನಿರೂಪಿಸಿದರು.