ನೆಲಮಂಗಲದಲ್ಲಿ ವೋಲ್ವೋ ಕಾರಿನ ಮೇಲೆ ಬಿದ್ದ ಬೃಹತ್ ಕಂಟೇನರ್ ಲಾರಿ; ಒಂದೇ ಕುಟುಂಬದ 6 ಮಂದಿ ಮೃತ್ಯು.

ಬೆಂಗಳೂರು: ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಆರು ಜನರು ಸಾವಿಗೀಡಾಗಿದ್ದಾರೆ. ನೆಲಮಂಗಲ ತಾಲೂಕಿನ ತಾಳೆಕೆರೆ ಬಳಿ ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ನಡುವೆ ಸರಣಿ ಅಪಘಾತ ಸಂಭವಿಸಿದೆ. ವೋಲ್ವೋ ಕಾರಿನ ಮೇಲೆ ಬೃಹತ್ ಕಂಟೇನರ್ ಲಾರಿ ಬಿದ್ದ ಪರಿಣಾಮ ಕಾರಿನಲಿದ್ದ ಒಂದೇ ಕುಟುಂಬದ ಒಟ್ಟು 6 ಮಂದಿಯೂ ಸಾವಿಗೀಡಾಗಿದ್ದಾರೆ.

ವೇಗವಾಗಿ ಬಂದ ಲಾರಿಗಳ ನಡುವೆ ಅಪಘಾತ ಸಂಭವಿಸಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿದೆ. ಸ್ಥಳಕ್ಕೆ ನೆಲಮಂಗಲ ಪೊಲೀಸರು ಆಗಮಿಸಿದ್ದು, ಕಂಟೇನರ್ ಲಾರಿಯನ್ನು ತೆರವುಗೊಳಿಸುತ್ತಿದ್ದಾರೆ. ಕಂಟೇನರ್‌ ಲಾರಿ ಬಿದ್ದ ರಭಸಕ್ಕೆ ವೋಲ್ವೋ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.

Oplus_131072

ಎರಡು ಲಾರಿಗಳ ಮದ್ಯ ಅಪಘಾತ ಸಂಭವಿಸಿದ್ದು, ನಂತರ ಪಕ್ಕದಲ್ಲೇ ಬರುತ್ತಿದ್ದ ಕಾರಿನ ಮೇಲೆ ಲಾರಿ ಬಿದ್ದಿದೆ. ಲಾರಿ ಉರುಳಿ ಬಿದ್ದು ಪರಿಣಾಮ ಕಾರು ಸಂಪೂರ್ಣ ಜಖಂ ಆಗಿದೆ. ಇಬ್ಬರು ಮಹಿಳೆಯರು, ಇಬ್ಬರು ಪುರುಷರು, ಮಗು ಸೇರಿ ಒಟ್ಟು 6 ಜನ ಸಾವಿಗೀಡಾಗಿದ್ದಾರೆ. ಮೃತರು ಮಹಾರಾಷ್ಟ್ರ ಸಾಂಗಲಿ ಜಿಲ್ಲೆ ಜತ್ ತಾಲೂಕಿ‌ ಮೊರಬಗಿ ಗ್ರಾಮದವರಾಗಿದ್ದು, ಇನ್ನೂ ಮೃತಪಟ್ಟವರನ್ನು IAST ಸಾಫ್ಟ್‌ವೇರ್ ಸಲ್ಯೂಷನ್‌ ಮುಖ್ಯಸ್ಥ ಚಂದ್ರಮ್ ಯಾಗಪ್ಪಗೋಳ್( 48), ಗೌರಾಬಾಯಿ (42), ದೀಕ್ಷಾ (12), ಜಾನ್ (16), ವಿಜಯಲಕ್ಷ್ಮಿ (36), ಆರ್ಯ (6) ಎಂದು ಗುರುತಿಸಲಾಗಿದೆ.

ವೋಲ್ವೋ ಕಂಪನಿಯ ಹೈ ಎಂಡ್ ಕಾರು:
KA 01 ND 1536 ನಂಬರ್‌ನ ವೋಲ್ವೋ ಕಂಪನಿಗೆ ಸೇರಿದ ಹೈ ಎಂಡ್ ಕಾರು ಇದಾಗಿದ್ದು, ಸುಮಾರು 1 ಕೋಟಿ ರೂಪಾಯಿ ಬೆಲೆಬಾಳುತ್ತದೆ. 2 ತಿಂಗಳ ಹಿಂದಷ್ಟೇ ದುಬಾರಿ ಕಾರು ಖರೀದಿಸಿದ್ದರು ಎಂದು ತಿಳಿದುಬಂದಿದೆ. ಕಾರು ಖರೀದಿ ವೇಳೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದ ಚಂದ್ರಮ್ ಕುಟುಂಬ, ಈಗ ಇದೇ ಕಾರಿನಲ್ಲಿ ಸಿಲುಕಿ ಈಗ ದುರಂತ ಅಂತ್ಯ ಕಂಡಿದ್ದಾರೆ.

10 ಕಿಲೋ ಮೀಟರ್​ಗೂ ಹೆಚ್ಚು ದೂರ ಟ್ರಾಫಿಕ್ ಜಾಮ್‌:
ಅಪಘಾತ ಸ್ಥಳದಲ್ಲಿ ನೂರಾರು ಜನರು ಸೇರಿದ್ದು, ನೆಲಮಂಗಲ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್‌ ಉಂಟಾಗಿದೆ. ಹೆದ್ದಾರಿಯಲ್ಲಿ 10 ಕಿಲೋ ಮೀಟರ್​ಗೂ ಹೆಚ್ಚು ದೂರ ಟ್ರಾಫಿಕ್ ಜಾಮ್‌ ಆಗಿದೆ. ವೋಲ್ವೋ XC90 B5 AWD ಮೈಲ್ಡ್ ಹೈಬ್ರೀಡ್ ಕಾರು ಘಟನೆಯಲ್ಲಿ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ವಿಜಯಪುರ ಮೂಲದ ಇಂಜಿನಿಯರ್ ಕುಟುಂಬ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದೆ.

IAST ಸಾಫ್ಟ್​ವೇರ್ ಸಲ್ಯೂಷನ್ಸ್​​ನ ಎಂಡಿ, ಸಿಇಒ ಆಗಿದ್ದ ಚಂದ್ರಮ್ ಅವರು, ಆಟೋಮೋಟಿವ್, ಎಂಬೆಡೆಡ್ ಸಾಫ್ಟ್​ವೇರ್ ಡೆವಲ್ಪಮೆಂಟ್​ನಲ್ಲಿ ಅನುಭವಿ ಆಗಿದ್ದು.18 ವರ್ಷಗಳಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಚಂದ್ರಮ್. ಎಲೆಕ್ಟ್ರಿಕ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರರಾಗಿದ್ದರು. ಸೂರತ್​ಕಲ್​ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದಿದ್ದರು ಎಂದು ತಿಳಿದುಬಂದಿದೆ.