ನೀಲಾವರ ಗ್ರಾಮದ ಕಿಂಡಿ ಅಣೆಕಟ್ಟಿನ ಮೇಲೆ ಭಾರೀ ತ್ಯಾಜ್ಯ ಶೇಖರಣೆ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ನದಿಗಳು ಮೈದುಂಬಿ ಹರಿಯುತ್ತಿದೆ. ಇದರ ಜೊತೆಗೆ ಹಲವಾರು ಅವಾಂತರಗಳನ್ನು ಸೃಷ್ಟಿ ಮಾಡಿದೆ.

ನೆರೆ ಇಳಿಯುತ್ತಿದ್ದಂತೆ ಆಗಿರುವ ಒಂದೊಂದೇ ಅವಾಂತರಗಳು ತೆರೆದುಕೊಳ್ಳುತ್ತಿದೆ. ಬ್ರಹ್ಮಾವರ ತಾಲೂಕಿನಲ್ಲಿ ಹರಿಯುವ ಸೀತಾ ನದಿ ನೀಲಾವರ ಗ್ರಾಮದ ಕಿಂಡಿ ಅಣೆಕಟ್ಟನ್ನು ಸಂಪೂರ್ಣ ಜಲಾವೃತ ಮಾಡಿತ್ತು. ನೆರೆ ನೀರು ಇಳಿಮುಖವಾಗುತ್ತಿದ್ದಂತೆ ಕಿಂಡಿ ಅಣೆಕಟ್ಟು ಮೇಲೆ ದೊಡ್ಡ ದೊಡ್ಡ ಮರದ ದಿಮ್ಮಿ, ಮರದ ರೆಂಬೆ ಕೊಂಬೆಗಳು ಕಸ ಪ್ಲಾಸ್ಟಿಕ್ ಇತ್ಯಾದಿಗಳು ಆವರಿಸಿಕೊಂಡು ಬಿಟ್ಟಿದೆ. ತ್ಯಾಜ್ಯ ನೀರು ಸರಾಗವಾಗಿ ಹರಿಯದೆ ಅಣೆಕಟ್ಟು ಮೇಲೆ ಶೇಖರಣೆಯಾಗಿತ್ತು. ನೀಲಾವರ ಗ್ರಾಮ ಪಂಚಾಯತ್ ಕಿಂಡಿ ಅಣೆಕಟ್ಟನ್ನು ಸ್ವಚ್ಛ ಮಾಡುವ ಕೆಲಸ ಮಾಡಿಸುತ್ತಿದೆ. ಅಣೆಕಟ್ಟಿನ ಮೇಲಿನ ತ್ಯಾಜ್ಯವನ್ನು ಸ್ವಚ್ಛ ಮಾಡುತ್ತಿದ್ದಂತೆ ನೀರು ನೀಲಾವರದಿಂದ ಮಟಪಾಡಿ ಗ್ರಾಮದತ್ತ ಸರಾಗವಾಗಿ ಹರಿಯುತ್ತಿದೆ. ಇದು ಒಂದು ಕಡೆಯ ಸಮಸ್ಯೆ ಅಲ್ಲ, ಜಿಲ್ಲೆಯ ಹತ್ತಾರು ಕಡೆ ಪಂಚಾಯತ್ ಗಳು ಈ ಸಮಸ್ಯೆಯನ್ನು ಎದುರಿಸುತ್ತಿದೆ.

Oplus_0
Oplus_0