ದೈಹಿಕ- ಮಾನಸಿಕ ಆರೋಗ್ಯದ ಸದೃಢತೆಗೆ ಗ್ರಾಮೀಣ ಕ್ರೀಡೆ ಸಹಕಾರಿ: ಅನಿಲ್ ಕುಮಾರ್
ತುಳುವನ್ನು ಅಧಿಕೃತ ಭಾಷೆಯಾಗಿಸಲು ಹೋರಾಟ ಅಗತ್ಯ: ರಕ್ಷಿತ್ ಶಿವರಾಮ್
ಬೆಳ್ತಂಗಡಿ: ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸದೃಢತೆಗೆ ಗ್ರಾಮೀಣ ಕ್ರೀಡೆ ಸಹಕಾರಿ. ಆದರೆ ಆಧುನಿಕ ಭರಾಟೆಯಲ್ಲಿ ನಮ್ಮ ಜೀವನ ಶೈಲಿ ಬದಲಾಗುತ್ತಿದೆ. ಹೀಗಾಗಿ ಹಿಂದಿನ ಜೀವನ ಮತ್ತೆ ಮರುಕಳಿಸುವ ಉದ್ದೇಶವೇ ಎನೇಲ್ ಗೊಬ್ಬು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕೇಂದ್ರ ಕಚೇರಿ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್. ಎಸ್. ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ, ಲ್ಯಾಲ, ಪ್ರಗತಿಬಂಧು, ಜ್ಞಾನವಿಕಾಸ, ಸ್ವಸಹಾಯ ಸಂಘಗಳ ಒಕ್ಕೂಟ ಬೆಳ್ತಂಗಡಿ ಮತ್ತು ಲ್ಯಾಲ ವಲಯ, ಜನಜಾಗೃತಿ ವೇದಿಕೆ ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಮತ್ತು ವಲಯ ಭಜನಾ ಪರಿಷತ್ ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ ಎನೇಲ್ ಗೊಬ್ಬು ಉದ್ಘಾಟಿಸಿ ಮಾತನಾಡಿದರು.
ಕ್ರೀಡಾಕೂಟಗಳಿಗೆ ಮೌಲ್ಯವನ್ನು ಕಟ್ಟಲು ಸಾಧ್ಯವಿಲ್ಲ. ಹಿಂದಿನ ಜೀವನ ಶೈಲಿಯನ್ನು ಮರೆತು ಯಾವುದೇ ಅರ್ಥವಿಲ್ಲದ ಹಾದಿಯಲ್ಲಿ ನಾವೆಲ್ಲ ಸಾಗುತ್ತಿದ್ದೇವೆ. ಗ್ರಾಮೀಣ ಕ್ರೀಡಾಕೂಟ ಉಳಿಸಿ. ಬೆಳೆಸಿ ಮುಂದಿನ ಪೀಳಿಗೆಗೆ ತಿಳಿಸಿ ಆಕರ್ಷಿತರಾಗುವಂತೆ ಮಾಡಬೇಕು ಎಂದರು.
ಈ ನೆಲೆಯಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಾಜ್ಯದ 250 ತಾಲೂಕಿನಲ್ಲಿ ಗ್ರಾಮೀಣ ಕ್ರೀಡಾಕೂಟ ಸಂಘಟಿಸಲಾಗುತ್ತಿದೆ ಎಂದು ಹೇಳಿದರು.
ಲ್ಯಾಲ ಪ್ರಗತಿಪರ ಕೃಷಿಕ ಭೋಜ ಮಲೆಕುಡಿಯ ಎನೇಲ್ ಗೊಬ್ಬು ಕೆಸರುಗದ್ದೆ ಕ್ರೀಡಾಕೂಟ ಉದ್ಘಾಟಿಸಿ ಶುಭಹಾರೈಸಿದರು.
ನಿವೃತ್ತ ಸೈನಿಕ ಗಡಿ ಭದ್ರತಾ ಪಡೆ ಸಿಗ್ನಲ್ ರೆಜಿಮೆಂಟ್ ಗಣೇಶ್ ಬಿ.ಎಲ್. ಲ್ಯಾಲ, ವಲಯ ಪ್ರಗತಿಬಂಧು ಒಕ್ಕೂಟ ವಲಯ ಅಧ್ಯಕ್ಷ ಬಿ.ಎ. ರಜಾಕ್ ಬೆಳ್ತಂಗಡಿ ವಲಯ ಜನಜಾಗೃತಿ ವೇದಿಕೆ ವಲಯ ಅಧ್ಯಕ್ಷ ಪುರುಷೋತ್ತಮ ಕನ್ನಾಜೆ, ಬೆಳ್ತಂಗಡಿ ಆಂ.ಮಾ.ಶಾಲೆ ಸಹ ಶಿಕ್ಷಕಿ ಪ್ರಮಿಳಾ ಉಪಸ್ಥಿತರಿದ್ದರು.
ಬೆಳ್ತಂಗಡಿ ಪಗತಿಬಂಧು ಸ್ವ- ಸಹಾಯ ಸಂಘ ಕೇಂದ್ರ ಒಕ್ಕೂಟದ ಅಧಕ್ಷ ಸೀತಾರಾತ್ ಆರ್. ಸ್ವಾಗತಿಸಿದರು. ಸಚಿನ್ ಗೇರುಕಟ್ಟೆ ನಿರೂಪಿಸಿದರು. ಕ್ರೀಡಾಕೂಟವನ್ನು ವಿಜಯ್ ಅತ್ತಾಜೆ ನಡೆಸಿಕೊಟ್ಟರು
ಮಕ್ಕಳು, ಮಹಿಳೆಯರಿಗೆ, ಪುರುಷರಿಗೆ ಹಗ್ಗ-ಜಗ್ಗಾಟ, ನಿಧಿ ಹುಡುಕುವುದು. ಸಂಧಿ ಪಾಡ್ಡನ, ಕಬ್ಬಡಿ, ತ್ರೋಬಾಲ್, ಗೂಟದ ಓಟ, ವಾಲಿಬಾಲ್, ಕಬ್ಬಡಿ ಸಹಿತ ಮುಂತಾದ ಕ್ರೀಡಾಕೂಟ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಅವರು, ತುಳುಭಾಷೆಯ ಶ್ರೀಮಂತಿಕೆಯನ್ನು ಸಾಧ್ಯವಾದಲ್ಲೆಲ್ಲ ನಾವು ಬೆಳೆಸಬೇಕು. ಧರ್ಮಸ್ಥಳದ ಪುಣ್ಯಭೂಮಿಯಲ್ಲಿ ಆರಂಭಿಸಿದ ಯೋಜನೆಗಳೆಲ್ಲವೂ ರಾಜ್ಯಮಟ್ಟದಲ್ಲಿ ಇತಿಹಾಸ ಸೃಷ್ಟಿಸಿವೆ. ಮುಂದೆ ಗ್ರಾಮೀಣ ಕ್ರೀಡಾಕೂಟವು ಮನೆಮಾತಾಗಲಿ ಎಂದು ಅವರು, ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿಸುವಲ್ಲಿ ನಮ್ಮೆಲ್ಲ ಹೋರಾಟ ಅಗತ್ಯವಾಗಿದೆ ಎಂದರು.
ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಬೆಳ್ತಂಗಡಿ ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಕಾಸಿಂ ಮಲ್ಲಿಗೆಮನೆ, ಬೆಳ್ತಂಗಡಿ ಬಿಜೆಪಿ ಮಂಡಲದ ಅಧ್ಯಕ್ಷ ಶ್ರೀನಿವಾಸ್ ರಾವ್, ಶ್ರೀ ಕ್ಷೇತ್ರ ಧ ಗ್ರಾ ಯೋಜನೆ ಬಿ.ಸಿ. ಟ್ರಸ್ಟ್ ಕರಾವಳಿ ಪ್ರಾದೇಶಿಕ ಮುಖ್ಯ ನಿರ್ದೇಶಕ ದುಗ್ಗೆ ಗೌಡ, ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಸುವರ್ಣ ಪ್ರತಿಷ್ಠಾನ ಬೆಳ್ತಂಗಡಿ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಹುಣೆಕಟ್ಟೆ ಒಕ್ಕೂಟದ ಅಧ್ಯಕ್ಷ ದಯಾನಂದ ಕೋಟ್ಯಾನ್, ಕನ್ನಾಜೆಬೈಲು ಒಕ್ಕೂಟದ ಅಧ್ಯಕ್ಷೆ ಯಶೋಧ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಸೀತಾರಾಮ್ ಉಪಸ್ಥಿತರಿದ್ದರು.