ತ್ರಿಶಾ ಕ್ಲಾಸಸ್‌: ಸಿ ಎ ಫೈನಲ್, ಸಿ ಎ ಇಂಟರ್ ಮೀಡಿಯೆಟ್ ಸಾಧಕರಿಗೆ ಸನ್ಮಾನ ಕಾರ್ಯಕ್ರಮ.

ಮಂಗಳೂರು ತ್ರಿಶಾ ಕ್ಲಾಸಸ್‌ ವತಿಯಿಂದ ಸಿ ಎ ಫೈನಲ್ ಮತ್ತು ‌ಇಂಟರ್ ಮೀಡಿಯೆಟ್ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ಜುಲೈ 16 ರಂದು ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತ್ರಿಶಾ ಸಂಸ್ಥೆ ಸಂಸ್ಥಾಪಕರು ಸಿ ಎ ಗೋಪಾಲಕೃಷ್ಣ ಭಟ್‌ ಅವರು, ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ನೀವು ಪಟ್ಟ ಪರಿಶ್ರಮಕ್ಕೆ ಇಂದು ಫಲ ದೊರಕಿದೆ. ಇಲ್ಲಿಂದ ಹೊಸ ಪಯಣ ಆರಂಭವಾಗುತ್ತದೆ, ನಿಮ್ಮ ಪ್ರೋತ್ಸಾಹಕ್ಕೆ ತ್ರಿಶಾ ಎಂದಿಗೂ ನಿಮ್ಮ ಜೊತೆ ಇದೆ ಎಂದು ತಿಳಿಸಿದರು.

ತ್ರಿಶಾ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಡಾ. ನಾರಾಯಣ್ ಕಾಯರ್ ಕಟ್ಟೆ ರವರು ವಿದ್ಯಾರ್ಥಿಗಳ ಸಾಧನೆಗೆ ಅವರ ಪರಿಶ್ರಮ, ತ್ಯಾಗ, ಗುರು ವೃಂದದವರ ಮತ್ತು ಪೋಷಕರ ಸಹಕಾರ ಕಾರಣ ಎಂದು ವಿದ್ಯಾರ್ಥಿಗಳಿಗೆ ಶುಭಕೋರುತ್ತಾ ಅಭಿನಂದಿಸಿದರು. ಸಿ ಎ ಫೈನಲ್ ಹಾಗೂ ಇಂಟರ್ ಮೀಡಿಯೆಟ್ ವಿದ್ಯಾರ್ಥಿಗಳನ್ನು ಹೆತ್ತವರ ಸಮ್ಮುಖದಲ್ಲಿ ಗೌರವಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಸಿ ಎ ಪಯಣದ ಅನುಭವವನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ತ್ರಿಶಾ ಸಂಸ್ಥೆಯ ಟ್ರಸ್ಟಿಗಳಾದ ನಮಿತಾ ಜಿ ಭಟ್ ಹಾಗೂ ರಾಮ್ ಪ್ರಭು, ತ್ರಿಶಾ ಕಾಲೇಜ್ ಆಫ್‌ ಕಾಮರ್ಸ್‌ ಆ್ಯಂಡ್‌ ಮ್ಯಾನೇಜ್ಮೆಂಟ್ ನ ಪ್ರಾಂಶುಪಾಲರಾದ ಪ್ರೊ. ಮಂಜುನಾಥ ಕಾಮತ್, ತ್ರಿಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುಪ್ರಭಾ, ತ್ರಿಶಾ ಕ್ಲಾಸಸ್ ಮಂಗಳೂರು ಕೇಂದ್ರದ ಮುಖ್ಯಸ್ಥೆ ಯಶಸ್ವಿನಿ ಯಶ್‌ ಪಾಲ್‌ ಮತ್ತು ತ್ರಿಶಾ ಕ್ಲಾಸಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸನ್ಮಾನಿಸಲ್ಪಡುವ ವಿದ್ಯಾರ್ಥಿಗಳ ಹೆಸರನ್ನು ಶಿವಾನಿ ವಾಚಿಸಿದರು. ಕಾರ್ಯಕ್ರಮವನ್ನು ಶ್ಯಾನೆಲ್ ಡಿ’ ಸೋಜ ನಿರೂಪಿಸಿ, ಆದಿತ್ಯಾ ಜೆ ಶೆಟ್ಟಿ ವಂದಿಸಿದರು.