ಉಡುಪಿ: ಬ್ರಹ್ಮಾವರದ ಐ.ಸಿ.ಎ.ಆರ್-ಕೃಷಿ ವಿಜ್ಞಾನಕೇಂದ್ರದ ವತಿಯಿಂದ ಆಗಸ್ಟ್ ೧೪ ರಿಂದ ೨೦೨೫ ರ ಫೆಬ್ರವರಿ ೧೪ ರವರೆಗೆ ೬ ತಿಂಗಳುಗಳ ಕಾಲ ತೋಟಗಾರಿಕಾ ಬೆಳೆಗಳಲ್ಲಿ ಸಸ್ಯೋತ್ಪಾದನೆ ಮತ್ತು ನರ್ಸರಿ ನಿರ್ವಹಣೆ ಕುರಿತು ಕೌಶಲ್ಯಾಧಾರಿತ ತರಬೇತಿ ನೀಡಲಾಗುತ್ತಿದ್ದು, ಅರ್ಹ ಆಸಕ್ತ
ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯಲ್ಲಿ ಬೀಜದಿಂದ ಕಸಿ ವಿಧಾನ, ಕಾಂಡದ
ತುಂಡುಗಳಿಂದ, ಗೂಟಿ ವಿಧಾನದಿಂದ ಸಸ್ಯೋತ್ಪಾದನೆ
ಮಾಡುವುದು, ಸಸ್ಯಗಾರಗಳ ನಿರ್ವಹಣೆ ಹಾಗೂ ಯಶಸ್ವಿ ಉದ್ಯಮಶೀಲತೆಗೆ ಸಾಲ ಸೌಲಭ್ಯಕ್ಕಾಗಿ ಬ್ಯಾಂಕುಗಳೊಂದಿಗೆ ಜೋಡಣೆ ಮಾಡಿಸಿ ಕೊಡುವುದರೊಂದಿಗೆ ತರಬೇತಿ ಪೂರೈಸಿದ
ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಮೊ.ನಂ: 9480458083, 7760331096 ಅಥವಾ 9741009131 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರ ಕಚೇರಿ ಪ್ರಕಟಣೆ ತಿಳಿಸಿದೆ.