ಡಾ. ಟಿಎಂಎ ಪೈ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಸ್ತುತ ಸಾಲಿನ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಕಾರ್ಯಕ್ರಮ.

ಮಣಿಪಾಲ: ಮಣಿಪಾಲದ ಡಾ.ಟಿಎಂಎ ಪೈ ಫೌಂಡೇಶನ್ ನ ಘಟಕದ ಡಾ.ಟಿಎಂಎ ಪೈ ಪಾಲಿಟೆಕ್ನಿಕ್ ನ 2024 25 ನೇ ಸಾಲಿನ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಕಾರ್ಯಕ್ರಮವು ಡಾ.ಟಿಎಂಎ ಪೈ ಪಾಲಿಟೆಕ್ನಿಕ್ ನ ಕ್ಯಾಂಪಸ್ ನಲ್ಲಿ ನಡೆಯಿತು.

ಓರಿಯೆಂಟೇಷನ್ ಕಾರ್ಯಕ್ರಮವನ್ನು ಮಣಿಪಾಲದ ಎಂಐಟಿ ಜಂಟಿ ನಿರ್ದೇಶಕರಾದ ಟಿಆರ್ ಡಾ.ಸೋಮಶೇಖರ್ ಭಟ್ ಅವರು ಉದ್ಘಾಟಿಸಿ ಮಾತನಾಡಿ, ಕೃತಕ ಬುದ್ಧಿ ಮತ್ತು ತಂತ್ರಜ್ಞಾನವನ್ನು ಬಳಸಿ ದೇಶದಲ್ಲಿ ತಂತ್ರಜ್ಞಾನವನ್ನು ಸುಧಾರಿಸಲು ಮತ್ತು ಹೆಚ್ಚು ಪ್ರಗತಿಯನ್ನು ಸಾಧಿಸಲು ನಾವು ಪ್ರಯತ್ನಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಗೌರವ ಅತಿಥಿಗಳಾಗಿದ್ದ ಮಣಿಪಾಲ ಡಾ.ಟಿಎಂಎ ಪೈ ಫೌಂಡೇಶನ್ ನ ಖಜಾಂಚಿ ಟಿ.ಸಚಿನ್ ಪೈ ಅವರು ಡಿಪ್ಲೋಮಾ ಶಿಕ್ಷಣದ ಅವಶ್ಯಕತೆ ಮತ್ತು ವಿವಿಧ ಅವಕಾಶಗಳ ಮಹತ್ವವನ್ನು ವಿವರಿಸಿದರು. ಡಿಪ್ಲೋಮಾ ಪದವಿ ಕಾರ್ಯಕ್ಷಮತೆಯನ್ನು ಮತ್ತು ವೃತ್ತಿ ಉನ್ನತಿಯನ್ನು ಹೊಂದಿಸಲು ದಾರಿದೀಪವಾಗಬಲ್ಲದು ಎಂದು ತಿಳಿಸಿದರು.

ಎಂಎಸ್ ಡಿಸಿ ನ ಚೇರ್ಮೆನ್ ನ ಬ್ರಿಗೇಡ್ ಡಾ.ಸುರ್ಜಿತ್ ಸಿಂಗ್ ಪಬ್ಲ ಮಾತನಾಡಿ, ಕಾಲೇಜುಗಳಲ್ಲಿ ಸಂವಹನ ಕೌಶಲ್ಯಗಳನ್ನು ಸುಧಾರಿಸಲು ಇರುವ ವ್ಯವಸ್ಥೆಗಳ ಕುರಿತು ಮಾಹಿತಿಯನ್ನು ನೀಡಿದರು. ಉತ್ತಮ ಸಂವಹನ ಕೌಶಲ್ಯಗಳು ವಿದ್ಯಾರ್ಥಿಗಳಿಗೆ ತಾಂತ್ರಿಕ ಕ್ಷೇತ್ರದಲ್ಲಿ ಯಶಸ್ಸನ್ನು ತಲುಪಲು ಮತ್ತು ಉದ್ಯಮಗಳಲ್ಲಿ ಪ್ರಗತಿಯನ್ನು ಸಾಧಿಸಲು ದಾರಿದೀಪ ವಾಗುತ್ತದೆ ಎಂದು ಹೇಳಿದರು.

ಮಣಿಪಾಲ ಮಾಹೆಯ ನಿರ್ದೇಶಕರಾದ ಡಾ.ಕರುಣಾಕರ್ ಎ.ಕೋಟೆಕಾರ್ ಅವರು ಓರಿಯೆಂಟೇಷನ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮೊದಲನೆಯದಾಗಿ ಸಕ್ಸಸ್ ಅಂದರೆ ಏನು ಅನ್ನೊದನ್ನು ತಿಳಿದುಕೊಳ್ಳಬೇಕು. ಸಕ್ಸಸ್ ಅಂದ್ರೆ ಏನು ಅಂತ ಕೆಲವೊಬ್ಬರು ಹೇಳ್ತಾರೆ ಇವತ್ತು ನಾವು ಟಿಎಂಎ ಪೈ ನಲ್ಲಿ ಅಡ್ಮಿಷನ್ ತಗೊಂಡ್ವಿ, ನಾನು ಇಲ್ಲಿಂದ ಹೊರಗೆ ಹೋಗುವಾಗ ಒಳ್ಳೆ ಕಾಲೇಜಿನಲ್ಲಿ ಇಂಜಿನಿಯರಿಂಗ್ ಸೀಟನ್ನು ಪಡ್ಕೊಂಡು ನಾನು ಹೊರಗೆ ಹೋಗುತ್ತೇನೆ ಅದು ಒಂದು ಸಕ್ಸಸ್ ಇವತ್ತಿನ ಮಟ್ಟಿಗೆ ನಿಮಗೆ ಅನಿಸ್ತಾ ಇರುವಂತದ್ದು. ಇವತ್ತು ಒಂದು ವಿಷಯ ನಮಗೆ ಈ ರೀತಿ ಸಕ್ಸಸ್ ಅನ್ನಿಸ್ತಾ ಇದ್ರೆ, ನಾಳೆ ನೀವು ಕಂಪನಿ ಗೆ ಸೇರಿ ಕೆಲಸ ಮಾಡುವಾಗ ಅವತ್ತು ಸಕ್ಸಸ್ ಅಂದ್ರೆ ಏನು ಕೇಳಿದ್ರೆ ಆ ಕಂಪನಿಯಲ್ಲಿ ಒಂದು ಅತ್ಯುನ್ನತ ಸ್ಥಾನ ಹೋಗಬೇಕೆನ್ನುವುದು ಅವತ್ತಿನ ಸಕ್ಸಸ್. ಸಕ್ಸಸ್ ಅಂದ್ರೆ ನಾನು ಈ ಕಾಲೇಜಿಗೆ ಇವತ್ತು ಅಡ್ಮಿಶನ್ ಮಾಡಿದ್ದೇನೆ ನನ್ನ ಅಪ್ಪ ಅಮ್ಮ ಕಷ್ಟಪಟ್ಟು ನನ್ನನ್ನ ಇಲ್ಲಿಗೆ ತಂದು ಮುಟ್ಟಿಸಿದ್ದಾರೆ ಅವರು ಹೆಮ್ಮೆಯಿಂದ ಬದುಕುವ ರೀತಿ ಹೆಮ್ಮೆಯಿಂದ ಹೇಳಿಕೊಳ್ಳುವ ರೀತಿಯಲ್ಲಿ ನಾನು ಈ ಕಾಲೇಜಿನಿಂದ ಓದು ಮುಗಿಸಿ ಒಳ್ಳೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತೇನೆ ಅನ್ನುವಂತದ್ದನ್ನು ದೃಢ ನಿರ್ಧಾರ ಮಾಡಿಕೊಂಡ್ರೆ ನಾನು ಅದನ್ನು ಸಕ್ಸಸ್ ಅಂತ ಕರೀತೇವೆ ಎಂದರು.

ಈ 10 ಅಂಶದಿಂದ ಸಕ್ಸಸ್ ಸಾಧ್ಯ:

ಬೀಯಿಂಗ್ ಆನ್ ಟೈಮ್, ವರ್ಕ್ ಎಥಿಕ್ಸ್, ಎಫರ್ಟ್, ಬಾಡಿ ಲ್ಯಾಂಗ್ವೇಜ್, ಎನರ್ಜಿ, ಆಟಿಟ್ಯೂಡ್, ಫ್ಯಾಷನ್, ಬೀಯಿಂಗ್ ಕೋಚೆಬಲ್, ಡುಯಿಂಗ್ ಎಕ್ಸ್ಟ್ರಾ, ಪ್ರಿಪೇರ್ಡ್. ವಿದ್ಯಾರ್ಥಿಗಳು ಈ ಮೇಲಿನ 10 ಅಂಶಗಳನ್ನು ಅಳವಡಿಸಿಕೊಂಡರೆ ಸಕ್ಸಸ್ ಆಗಲು ಸಾಧ್ಯವಿದೆ ಎಂದು ಡಾ.ಕರುಣಾಕರ್ ಎ.ಕೋಟೆಕಾರ್ ಅವರು ತಿಳಿಸಿದರು.

ಈ ವೇಳೆ ಎಂ ಎಸ್ ಡಿ ಸಿ ರಿಜಿಸ್ಟ್ರಾರ್ ಡಾ.ನಾರಾಯಣ್ ಶೆಣೈ ಕೆ. ಸೇರಿದಂತೆ ಆಡಳಿತ ಮಂಡಳಿಯ ಸಿಬ್ಬಂದಿಗಳು ಉಪನ್ಯಾಸಕರು ಉಪಸ್ಥಿತರಿದ್ದರು.

ಕಿಶನ್ ಅವರು ವಿದ್ಯಾರ್ಥಿಗಳಿಗೆ ಕಾಲೇಜಿನ ನಿಬಂಧನೆ ಹಾಗೂ ನಿಯಮಾವಳಿಗಳನ್ನು ತಿಳಿಸಿದರು.

ಪ್ರಾಂಶುಪಾಲರಾದ ಕಾಂತರಾಜ್ ಎಎನ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಅಪರ್ಣ ನಾಯಕ್, ಅಮೃತಕಲಾ, ಸಿಜಿಕ್ ಸತ್ಯನ್ ಹಾಗೂ ವಿಭಾ ಶೆಣೈ ಅವರು ಅತಿಥಿಗಳ ಪರಿಚಯ ಮಾಡಿದರು. ಉಪ ಪ್ರಾಂಶುಪಾಲರಾದ ಗಣೇಶ್ ಬಿ. ವಂದಿಸಿದರು. ಉಪನ್ಯಾಸಕಿ ಮಹಾಲಕ್ಷ್ಮಿ ಶೆಣೈ ಕಾರ್ಯಕ್ರಮವನ್ನು ನಿರೂಪಿಸಿದರು.