ಜೆಇಇ ಮೈನ್ (ಬಿ.ಆರ್ಕ್) ಫಲಿತಾಂಶ: ಜ್ಞಾನಸುಧಾದ ಮೂವರು ವಿದ್ಯಾರ್ಥಿಗಳಿಗೆ 99 ಕ್ಕಿಂತ ಅಧಿಕ ಪರ್ಸಂಟೈಲ್, 22 ವಿದ್ಯಾರ್ಥಿಗಳಿಗೆ 95ಕ್ಕಿಂತ ಅಧಿಕ ಪರ್ಸಂಟೈಲ್

ಕಾರ್ಕಳ : ರಾಷ್ಟ್ರ ಮಟ್ಟದಲ್ಲಿ ಎನ್.ಟಿ.ಎ ನಡೆಸುವ ಜೆಇಇ ಮೈನ್.ಬಿ.ಆರ್ಕ್ನ ಮೊದಲ ಹಂತದ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳಿಗೆ ೯೯ಕ್ಕಿಂತ ಅಧಿಕ ಪರ್ಸಂಟೈಲ್ ಹಾಗೂ ೨೨ ವಿದ್ಯಾರ್ಥಿಗಳಿಗೆ ೯೫ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿ ಉತ್ತಮ ಸಾಧನೆ ಮಾಡಿರುತ್ತಾರೆ.

ವಿದ್ಯಾರ್ಥಿಗಳಾದ ಕೆ.ಮನೋಜ್ ಕಾಮತ್ ೯೯.೮೨೩೩೦೫೫ ಪರ್ಸಂಟೈಲ್, ದರ್ಶನ್ ಡಿ ಬಾಯಾರ್ ೯೯.೬೪೬೬೧೧೧ ಪರ್ಸಂಟೈಲ್, ಚಿಂತನ ಜೆ. ಮೆಘವತ್ ೯೯.೨೬೧೫೦೭೮ ಪರ್ಸಂಟೈಲ್, ಆಕಾಶ್ ಎಚ್ ಪ್ರಭು ೯೮.೯೯೮೭೩೧೪ ಪರ್ಸಂಟೈಲ್, ಪ್ರಜ್ವಲ್ ನಾಯಕ್ ೯೮.೬೪೩೦೭೭೨ ಪರ್ಸಂಟೈಲ್, ಮಂಜೀತ್ ಎಸ್. ಪದ್ಮಶಾಲಿ ೯೮.೬೪೩೦೭೭೨ ಪರ್ಸಂಟೈಲ್, ಸಮನ್ವಿತಾ ಜಿ.ನಾಯಕ್ ೯೮.೫೬೩೭೯೧೨ ಪರ್ಸಂಟೈಲ್, ಸಂಜನಾ ಶೆಣೈ ೯೮.೩೩೭೨೫೯೯ ಪರ್ಸಂಟೈಲ್, ವಿಷ್ಣು ಧರ್ಮಪ್ರಕಾಶ್ ೯೮.೦೨೪೬೪೬೬ ಪರ್ಸಂಟೈಲ್, ಅಭಿರಾಮ್ ತೇಜ ೯೭.೭೩೪೬೮೬೫ ಪರ್ಸಂಟೈಲ್, ತರುಣ್ ಎ.ಸುರಾನ ೯೭.೬೨೩೬೮೬೧ ಪರ್ಸಂಟೈಲ್, ಪ್ರಣವ್ ಎನ್ ಮಾಳಗಿಮನೆ ೯೭.೫೦೧೩೫೯೨ ಪರ್ಸಂಟೈಲ್, ಹೃತ್ವಿಕ್ ಶೆಟ್ಟಿ ೯೭.೩೭೬೭೬೬೯ ಪರ್ಸಂಟೈಲ್, ಧ್ರುವ್ ಶೆಟ್ಟಿ ೯೭.೨೮೧೬೨೩೮ ಪರ್ಸಂಟೈಲ್, ಗೌತಮ್ ಹುಲ್ಲೋಲಿ ೯೭.೧೫೦೨೩೫೬ ಪರ್ಸಂಟೈಲ್, ರೋನಕ್ ಎಸ್ ಗುರಾನಿ ೯೬.೮೬೦೨೭೫೫ ಪರ್ಸಂಟೈಲ್, ಆದಿತ್ಯ ಕೃಷ್ಣ ಟಿ ೯೬.೭೦೬೨೩೪೧ ಪರ್ಸಂಟೈಲ್, ಗಗನ್ ಪೆರ್ವಾಜೆ ೯೬.೭೦೬೨೩೪ ಪರ್ಸಂಟೈಲ್, ನಿದೇಶ್ ಶೆಟ್ಟಿ ೯೫.೫೬೪೫೧೬೧ ವರುಣ್ ಪ್ರಭು ೯೫.೩೫೧೫೭೬೭ ವರಪ್ರಸಾದ್ ಶೆಟ್ಟಿ ೯೫.೩೫೧೫೭೬೭ ಪರ್ಸಂಟೈಲ್ ಹಾಗೂ ನಿರಂಜನ್ ಎಂ.ಕೆ ೯೫.೩೫೧೫೭೬೭ ಪರ್ಸಂಟೈಲ್ ಪಡೆದು ಉತ್ತಮ ಸಾಧನೆ ಮಾಡಿರುತ್ತಾರೆ.

ಜೆ.ಇ.ಇ ಮೈನ್. ಬಿ.ಆರ್ಕ್ನ ಮೊದಲ ಹಂತದ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳಿಗೆ ೯೯ಕ್ಕಿಂತ ಅಧಿಕ ಪರ್ಸಂಟೈಲ್, ೯ ವಿದ್ಯಾರ್ಥಿಗಳಿಗೆ ೯೮ಕ್ಕಿಂತ ಅಧಿಕ ಪರ್ಸಂಟೈಲ್, ೧೫ ವಿದ್ಯಾರ್ಥಿಗಳಿಗೆ ೯೭ಕ್ಕಿಂತ ಅಧಿಕ ಪರ್ಸಂಟೈಲ್, ೧೮ ವಿದ್ಯಾರ್ಥಿಗಳಿಗೆ ೯೬ಕ್ಕಿಂತ ಅಧಿಕ ಪರ್ಸಂಟೈಲ್ ಹಾಗೂ ೨೨ ವಿದ್ಯಾರ್ಥಿಗಳಿಗೆ ೯೫ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುತ್ತಾರೆ.
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೆ ಬೆನ್ನೆಲುಬಾದ ಜ್ಞಾನಸುಧಾ ಎಂಟ್ರನ್ಸ್ ಅಕಾಡೆಮಿಯ ಪರಿಶ್ರಮವನ್ನು ಶ್ಲಾಘಿಸಿ ಎಲ್ಲರನ್ನು ಅಭಿನಂದಿಸಿದ್ದಾರೆ.