ಮೂಡುಬಿದಿರೆ: ಜೆಇಇ ಎರಡನೇ ಹಂತದ ಪರೀಕ್ಷೆಯಲ್ಲಿ ಆಳ್ವಾಸ್ ಪ.ಪೂ. ಕಾಲೇಜಿನ ಮೂವರು ವಿದ್ಯಾರ್ಥಿಗಳು 99 ಪರ್ಸೆಂಟೈಲ್ ಗಿಂತ ಅಧಿಕ ಪಡೆದಿದ್ದಾರೆ.
ಎಚ್.ಆರ್. ರಜತ್ 99.6655, ಪ್ರಶಾಂತ 99.1289 ಹಾಗೂ ಪ್ರಜ್ವಲ್ ಚೌಧರಿ ನಂದೇಲಾ 99.0154 ಪರ್ಸೆಂಟೈಲ್ ಗಳಿಸಿದ್ದಾರೆ.
ಕೆಟಗರಿ ವಿಭಾಗದಲ್ಲಿ ಆಕಾಶ್ ಬಸವರಾಜ್ ಬುಲ್ಲಮನ್ನವರ ರಾಷ್ಟ್ರ ಮಟ್ಟದಲ್ಲಿ 290ನೇ ರ್ಯಾಂಕ್, ಪ್ರಥಮ್ ಎಸ್. 425ನೇ ರ್ಯಾಂಕ್, ಆರ್ ರಕ್ಷಿತಾ 865ನೇ ರ್ಯಾಂಕ್ ಗಳಿಸಿದ್ದಾರೆ.
14ಮಂದಿ 98 ಪರ್ಸೆಂಟೆಲ್ಗಿಂತ ಅಧಿಕ, 34 ಮಂದಿ 97 ಪರ್ಸೆಂಟೈಲ್ ಗಿಂತ ಅಧಿಕ, 68 ಮಂದಿ 96 ಪರ್ಸೆಂಟೈಲ್ಗಿಂತ ಅಧಿಕ, 120 ಮಂದಿ 95 ಪರ್ಸೆಂಟೈಲ್ ಗಿಂತ ಅಧಿಕ ಹಾಗೂ 234 ವಿದ್ಯಾರ್ಥಿಗಳು 90 ಪರ್ಸೆಂಟೈಲ್ ಗಿಂತ ಅಧಿಕ ಅಂಕ ಪಡೆದಿದ್ದಾರೆ.
ಭೌತಶಾಸ್ತ್ರದಲ್ಲಿ ಇಬ್ಬರು 100 ಪರ್ಸೆಂಟೈಲ್ ಗಿಂತ ಅಧಿಕ 24 ವಿದ್ಯಾರ್ಥಿಗಳು 99 ಪರ್ಸೆಂಟೈಲ್ ಗಿಂತ ಅಧಿಕ ಅಂಕ ಪಡೆದಿದ್ದಾರೆ. ರಸಾಯನಶಾಸ್ತ್ರದಲ್ಲಿ 48 ಮಂದಿ ಗಣಿತದಲ್ಲಿ 5 ಮಂದಿ 99 ಪರ್ಸೆಂಟೈಲ್ ಗಿಂತ ಅಧಿಕ ಅಂಕ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾದನೆಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹರ್ಷ ವ್ಯಕ್ತಪಡಿಸಿದ್ದಾರೆ.