ಕೇರಳದ ಮೀನಾಕ್ಷಿ ಅಮ್ಮನವರಿಂದ ಕಳರಿಪಯಟ್ಟು ಸಾಹಸ ಕಲೆ ಪ್ರದರ್ಶನ

ಉಡುಪಿ: ತನ್ನ 82ರ ಇಳಿ ವಯಸ್ಸಿನಲ್ಲೂ ನವ ತರುಣಿಯಂತೆ ಮೀನಾಕ್ಷಿ ಅಮ್ಮ ಕಳರಿಪಯಟ್ಟು ಸಾಹಸ ಕಲೆಯನ್ನು ಮಾಡಿ ತೋರಿಸಿದರು. ನಗರದ ಪಿಪಿಸಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ ಕಳರಿ ಸಮರ ಕಲೆಯ ಪ್ರಾತ್ಯಕ್ಷಿತೆಯಲ್ಲಿ ಅವರು ನೀಡಿದ ಪ್ರದರ್ಶನ ಗಮನ ಸೆಳೆಯಿತು.
ಕಳರಿಪಯಟ್ಟು ಪ್ರಾತ್ಯಕ್ಷಿಕೆ ನೀಡಿದ ಮೀನಾಕ್ಷಿ ಅಮ್ಮ, ತನ್ನ ಶಿಷ್ಯರ ಜೊತೆಗೂಡಿ ಲೀಲಾಜಾಲವಾಗಿ ಕಳರಿ ಸಮರ ಕಲೆಯ ಪಟ್ಟುಗಳನ್ನು ಪ್ರದರ್ಶಿಸಿದರು. 82 ವರ್ಷ ವಯಸ್ಸಿನ ಹಿರಿಯ ಜೀವದ ಈ ಅದ್ಭುತ ಸಾಧನೆಯನ್ನು ಕಂಡು ಪ್ರೇಕ್ಷಕರು ಬೆರಗಾದರು. ಕೇರಳದ ಮೀನಾಕ್ಷಿ ಅವರ ಈ ಸಾಧನೆಯನ್ನು ಕೊಂಡಾಡಿದರು. ಈ ಸಮರಕಲೆಯ ಸಾಧನೆಗಾಗಿ ಇವರಿಗೆ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

Oplus_0
Oplus_0