ಕುಂದಾಪುರ: ಎರಡು ದಿನಗಳ ಹಿಂದೆ ಭಾರೀ ಗಾಳಿಮಳೆಗೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಅ.9ರಂದು ಸಂಜೆ ಪತ್ತೆಯಾಗಿದೆ.
ಮೃತಪಟ್ಟವರು ಕೊಡ್ಲಾಡಿ ಗ್ರಾಮದ ಶೇಖರ(60). ಅ.7ರಂದು ಇವರು ಸಿದ್ದಾಪುರದಲ್ಲಿ ಸಂಬಂಧಿಕರ ಮದುವೆಯನ್ನು ಮುಗಿಸಿ ಅಂಪಾರಿಗೆ ಬಂದು ಅಲ್ಲಿಂದ ಮನೆಗೆ ನಡೆದುಕೊಂಡು ಹೋಗಿ ಮನೆಯ ಸಮೀಪದ ಹೊಳೆಯನ್ನು ದಾಟುವಾಗ ವಿಪರಿತ ಗಾಳಿ, ಮಳೆಯಿಂದ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಅ.9ರಂದು ಸಂಜೆ ವೇಳೆ ಇವರ ಮೃತದೇಹವು ಆಜ್ರಿ ಗ್ರಾಮದ ಕೊಡ್ಗಿ ಹೊಳೆಯ ಮಧ್ಯದಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












