ಕುಂದಾಪುರ: ಕುಂದಾಪುರ ಎಪಿಎಂಸಿ ಮಾರ್ಕೇಟ್ ರೋಡ್ನಲ್ಲಿರುವ ತೆಕ್ಕಟ್ಟೆಯ ಅಬ್ದುಲ್ ಗನಿ ಸಾಹೇಬ್ ಎಂಬವರ ದಿನಸಿ ಅಂಗಡಿಗೆ ಜೂ.12 ರಂದು ರಾತ್ರಿ ನುಗ್ಗಿದ ಕಳ್ಳರು, ಡ್ರಾವರ್ನಲ್ಲಿದ್ದ 20,000ರೂ., ಎರಡು ಮೊಬೈಲ್ ಫೋನ್ ಹಾಗೂ ಡಿವಿಯಾರ್ ಮೆಶೀನ್ ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.