ಕಾಶ್ಮೀರದಲ್ಲಿ ಉಗ್ರರ ದಾಳಿ ಹಿನ್ನೆಲೆ – ಕರಾವಳಿ ತೀರದಲ್ಲಿ ಕಟ್ಟೆಚ್ಚರ

ಉಡುಪಿ: ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸ ಹಿನ್ನೆಲೆಯಲ್ಲಿ ಕರ್ನಾಟಕ ಕರಾವಳಿಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಕರ್ನಾಟಕದಲ್ಲಿ ಸುಮಾರು 326 ಕಿಲೋಮೀಟರ್ ಗೂ ಅಧಿಕ ಕರಾವಳಿ ತೀರ ಇದ್ದು ಕರಾವಳಿ ಮೂಲಕ ಭಯೋತ್ಪಾದಕ ಚಟುವಟಿಕೆ ಸಾಧ್ಯತೆ ಹಿನ್ನಲೆಯಲ್ಲಿ ಕಣ್ಗಾವಲು ಇರಿಸಲಾಗಿದೆ.

Oplus_131072

ಕರಾವಳಿ ಕಾವಲು ಪಡೆಯ 13 ಬೊಟ್ ಗಳು ಸದ್ಯ ಪೆಟ್ರೋಲಿಂಗ್‌ ನಡೆಸುತ್ತಿವೆ. ಕಡಲತೀರ ಪ್ರದೇಶದಲ್ಲಿ ಒಟ್ಟು 9 ಕರಾವಳಿ ಕಾವಲು ಪಡೆ ಠಾಣೆಗಳಿವೆ.ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಕಾವಲು ಪಡೆ, ಗುಪ್ತಚರ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದು ಜಂಟಿ ಕಾರ್ಯಾಚರಣೆ ನಡೆಸಿದೆ.

Oplus_131072

ಭದ್ರತೆಯ ದೃಷ್ಟಿಯಿಂದ ಆಳ ಸಮುದ್ರ ಮೀನುಗಾರರಿಗೂ ಮಾಹಿತಿ ನೀಡಲಾಗಿದ್ದು ಕಡಲಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಓಡಾಟ ಕಂಡು ಬಂದರೆ, ತಕ್ಷಣ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ.ಅರಬ್ಬಿ ಸಮುದ್ರ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು ಯಾವುದೇ ವಿದೇಶಿ ಬೋಟುಗಳು, ವಿದೇಶಿ ವ್ಯಕ್ತಿಗಳು ಕಂಡು ಬಂದರೆ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ.