ಕಾರ್ಕಳ:ಭಾರತೀಯ ಸಂವಿಧಾನ ಯಾವುದೇ ಜಾತಿಧರ್ಮ ಭಾಷೆ ಪ್ರದೇಶಕ್ಕೆ ಸೀಮಿತವಾದ ಗ್ರಂಥವಲ್ಲ.ಇದೊಂದು ರಾಷ್ಟ್ರೀಯತೆಯನ್ನು ಪ್ರತಿಬಿಂಬಿಸುವ ಪವಿತ್ರವಾದ ಮೇರು ಗ್ರಂಥ.ನಾವು ಪೂರ್ವ ಗ್ರಹ ಪೀಡಿತರಾಗಿ ಭಾರತೀಯ ಸಂವಿಧಾನವನ್ನು ಹಿಡಿದು ನೇೂಡಿದಾಗ ನಾವು ಅಲ್ಪ ಮಾನವರಾಗಿ ಬಿಂಬಿತರಾಗುತ್ತೇವೆ.ಇದು ಇಂದಿನ ಅತೀ ದೊಡ್ಡ ಸಮಸ್ಯೆ ಕೂಡ.ಸಮಾನತೆ ಭಾತೃತ್ವ ಸೌಹಾರ್ದತೆಯ ಗುಣಗಳೇ ನಮ್ಮ ಸಂವಿಧಾನದ ಆಶಯಯೂ ಹೌದು.
ಡಾ.ಬಿ.ಆರ್.ಅಂಬೇಡ್ಕರ್ ರಂತಹ ಮಹಾನ್ ಸಂವಿಧಾನ ತಜ್ಜರ ಅವಿರತವಾದ ಪ್ರಯತ್ನದಿಂದಲೇ ಜಗತ್ತಿನಲ್ಲಿಯೇ ಅತಿ ಶ್ರೇಷ್ಠವಾದ ಸಂವಿಧಾನವನ್ನು ಹೊಂದುವ ಯೇೂಗ ನಮ್ಮದಾಗಿದೆ.ಹಾಗಾಗಿ ಭಾರತದ ಸಂವಿಧಾನವನ್ನು ನಮ್ಮೆಲ್ಲರ ಸುಖ ನೆಮ್ಮದಿಗಾಗಿ ಲೇೂಕಾಪರ್ಪಣೆಗೊಳಿಸೇೂಣ”ಎಂದು ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ನಿವೃತ್ತ ಮುಖ್ಯಸ್ಥ ರಾಜ್ಯ ಶಾಸ್ತ್ರ ಎಂಜಿಎಂ.ಕಾಲೇಜು ಉಡುಪಿ ಅಭಿಪ್ರಾಯಿಸಿದರು.
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ವತಿಯಿಂದ ಕಾರ್ಕಳ ಕೇೂಟಿ ಚೆನ್ನಯ ಥೀಮ್ ಪಾರ್ಕ್ ನ ಯಕ್ಷ ರಂಗಾಯಣ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಕೊಂಡ ಕಾರ್ಯಕ್ರಮದಲ್ಲಿ “ನಮ್ಮ ಸಂವಿಧಾನದ ಅಕೃತಿ ಮತ್ತು ಆಶಯ”ದ ಕುರಿತಾಗಿ ಶಿಖರೇೂಪನ್ಯಾಸ ನೀಡಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಭಾಧ್ಯಕ್ಷತೆಯನ್ನು ಯಕ್ಷ ರಂಗಾಯಣ ಕೇಂದ್ರದ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳರು ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ರಂಗ ಸಮಾಜ ಸದಸ್ಯ ಮಹಾಂತೇಶ್ ಗಜೇಂದ್ರಘಡ ಬಾಗಲಕೋಟೆ ಉಪಸ್ಥಿತರಿದ್ದರು. ರಂಗ ಅಧ್ಯಯನ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಊರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂಡರು.












