ಕಾರ್ಕಳದಲ್ಲಿ ಅತ್ಯಾಚಾರ ಪ್ರಕರಣ.

ಕಾರ್ಕಳ: ಕಾರ್ಕಳದಲ್ಲಿ ಆ.23 ರಂದು ಮಧ್ಯಾಹ್ನ ನಡೆದ ಅತ್ಯಾಚಾರ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರು ಇದ್ದರೂ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಿ ಎಂದು ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಶೆಟ್ಟಿ ಆಗ್ರಹಿಸಿದ್ದಾರೆ.

ಮಹಿಳೆಯ ಮೇಲೆ ಅತ್ಯಾಚಾರ ಮಾಡುವ ಪೈಶಾಚಿಕ ಮನಸ್ಥಿತಿ ಈ ಸಮಾಜಕ್ಕೆ ಕಂಟಕವಾದಾದ್ದು, ಇದನ್ನು ಯಾರು ಕೂಡ ಸಹಿಸಲು ಸಾಧ್ಯ ಇಲ್ಲ. ಈ ಘಟನೆಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈ ಗೊಳ್ಳುವಂತೆ ಗೃಹ ಸಚಿವರಲ್ಲಿ ಮಾತನಾಡಿದ್ದೇನೆ. ಯಾವುದೇ ಕಾರಣಕ್ಕೂ ಅತ್ಯಾಚಾರಿಗಳನ್ನು ತಪ್ಪಿಸೋಕೆ ಬಿಡವುದಿಲ್ಲ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.