ಕಾರ್ಕಳ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಸಮಾಜಘಾತುಕರು ಹಿಂದೂ ಯುವತಿಯೋರ್ವಳನ್ನು ಅಪಹರಿಸಿ, ಬಲವಂತಾಗಿ ಅಮಲು ಪದಾರ್ಥವನ್ನು ಕುಡಿಸಿ ಗ್ಯಾಂಗ್ ರೇಪ್ ನಡೆಸಿರುವ ಅಮಾನುಷ ಕೃತ್ಯ ಅತ್ಯಂತ ಖಂಡನೀಯ ಎಂದು ಬಿಜೆಪಿ ನಿಕಟಪೂರ್ವ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ತಿಳಿಸಿದ್ದಾರೆ.
ಸುಶೀಕ್ಷಿತ ಕರಾವಳಿ ಜಿಲ್ಲೆಯಲ್ಲಿ ಇಂತಹ ಹೇಯ ಘಟನೆ ನಡೆದಿರುವುದು ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ.
ಶಿಕ್ಷಣ ಮತ್ತು ವೃತ್ತಿಗಾಗಿ ಯುವತಿಯರು ಜಿಲ್ಲೆಗೆ ಅಗಮಿಸುತ್ತಿರುವುದು ಸ್ವಭಾವಿಕ. ಕೆಲವು ಮತಾಂಧ ದುಷ್ಟ ಶಕ್ತಿಗಳು ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದು, ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲ ಎಂಬಂತಾಗಿದೆ.
ಪೊಲೀಸ್ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲ ಆರೋಪಿಗಳನ್ನು ಬಂಧಿಸಿ, ಅಪರಾಧಿಗಳಿಗೆ ಕಾನೂನು ರೀತ್ಯಾ ಕಠಿಣ ಶಿಕ್ಷೆ ವಿಧಿಸಬೇಕು ಎಂದು ನಯನಾ ಗಣೇಶ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.