ಕಾರ್ಕಳ: ಕೆರ್ವಾಶೆ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಭರ್ಜರಿ ಗೆಲುವು

ಉಡುಪಿ: ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಪಂನಲ್ಲಿ ತೆರವಾಗಿದ್ದ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಧರ್ಮರಾಜ ಹೆಗ್ಡೆ ಅವರು 367 ಮತಗಳೊಂದಿಗೆ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ನ. 23ರಂದು ಉಪಚುನಾವಣೆ ನಡೆದಿತ್ತು. ಇಂದು ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಿತು.

ಇಲ್ಲಿ (ಸಾಮಾನ್ಯ ಮೀಸಲಾತಿ) 1 ಸದಸ್ಯ ಸ್ಥಾನ ಖಾಲಿಯಿದ್ದು, ಬಿಜೆಪಿಯಿಂದ ಧರ್ಮರಾಜ ಹೆಗ್ಡೆ ಹಾಗೂ ಕಾಂಗ್ರೆಸ್‌ನಿಂದ ನಾರಾಯಣ ನಾಯಕ್ ಸ್ಪರ್ಧಿಸಿದ್ದರು.

377 ಪುರುಷರು, 383 ಮಹಿಳೆಯರು ಸೇರಿದಂತೆ ಒಟ್ಟು 760 ಮತದಾರರಿದ್ದು, 78.1579ಶೇ. ಮತದಾನವಾಗಿತ್ತು. ಧರ್ಮರಾಜ ಹೆಗ್ಡೆ 367 ಮತ ಹಾಗೂ ನಾರಾಯಣ ನಾಯಕ್ 213 ಮತ ಪಡೆದಿದ್ದಾರೆ.