ಕಾರ್ಕಳ: ತಾಲೂಕಿನ ಇರ್ವತ್ತೂರು ಗ್ರಾಮದ ಗೊಲ್ದಿಂಡಿ ಎಂಬಲ್ಲಿ ಬಾಲಕನೋರ್ವ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಸೆ.21ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಗೊಲ್ದಿಂಡಿ ನಿವಾಸಿ ಪುಷ್ಪಎಂಬವರ ಮಗ ಚರಣ್ರಾಜ್(13) ಎಂದು ಗುರುತಿಸಲಾಗಿದೆ.
ಸಾಣೂರು ಹೈಸ್ಕೂಲಿ ನಲ್ಲಿ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಈತ, ಮಧ್ಯಾಹ್ನ ಶಾಲೆಗೆ ರಜೆ ಇದ್ದ ಕಾರಣ ಇತರ ಮಕ್ಕಳ ಜೊತೆ ಆಟ ಆಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಆತ ಆಕಸ್ಮಿಕವಾಗಿ ಕಾಲು ಜಾರಿ ಶಾಂಭವಿ ಹೊಳೆಗೆ ಬಿದ್ದಿದ್ದು, ಕೂಡಲೇ ಸಾರ್ವಜನಿಕರು ಆತನನ್ನು ನೀರಿನಿಂದ ಮೇಲಕ್ಕೆ ಎತ್ತಿ ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಚರಣ್ರಾಜ್, ದಾರಿ ಮಧ್ಯೆ ಮೃತಪಟ್ಯಿರುವುದಾಗಿ ವೈದ್ಯರು ತಿಳಿಸಿದರು.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.