ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪೊಲಿಪು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಡವೊಂದು ಕಾಣಿಸಿಕೊಂಡಿದೆ. ಉಡವನ್ನು ನೋಡಿದ ಶಿಕ್ಷಕರು ಒಂದು ಕ್ಷಣ ಬೆಚ್ಚಿಬಿದ್ದರು. ದಿಢೀರ್ ಆಗಿ ಕಾಲೇಜಿನ ಕೊಠಡಿಯೊಳಗೆ ಪ್ರವೇಶಿದ ಉಡ ಗಾಬರಿ ಗಲಿಬಿಲಿಯಿಂದ ಅತ್ತಿಂದಿತ್ತಾ ಓಡಾಡಿದೆ.
ಕೊಠಡಿಯಲ್ಲಿ ಹರಿದಾಡುವ ಸರೀಸೃಪ ಕಂಡ ಶಿಕ್ಷಕ ಶಿಕ್ಷಕಿಯರು ಭಯಭೀತರಾಗಿ ಹೊರಗೆ ಓಡಿಬಂದರು. ತಕ್ಷಣವೇ ಉರಗ ತಜ್ಞರಾದ ಪ್ರಶಾಂತ್ ಪೂಜಾರಿ ಮತ್ತು ಶಿವಾನಂದ ಪೂಜಾರಿ ಅವರಿಗೆ ಮಾಹಿತಿ ನೀಡಲಾಯಿತು.
ಅವರು ಸ್ಥಳಕ್ಕೆ ಬಂದು ಕಾರ್ಯಾಚರಣೆ ಮೂಲಕ ಉಡವನ್ನು ಸೆರೆ ಹಿಡಿದರು. ಬಳಿಕ ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಯಿತು.
ಎರಡು ದಿನಗಳ ಹಿಂದೆ ಕಾಪುವಿನ ದಂಡ ತೀರ್ಥ ಎಂಬಲ್ಲಿ ತಂಪು ಪಾನೀಯದ ಟಿನ್ ಮುಖಕ್ಕೆ ಸಿಲುಕಿಕೊಂಡು ಒದ್ದಾಡುತ್ತಿದ್ದ ಉಡವನ್ನು ರಕ್ಷಣೆ ಮಾಡಲಾಗಿತ್ತು.