ಕಾಪು: ಕಾಪು ಸಮೀಪದ ಸಮುದ್ರದಲ್ಲಿ ಮೀನುಗಾರಿಕೆ ವೇಳೆ ಆಕಸ್ಮಿಕವಾಗಿ ಬೋಟ್ನಿಂದ ನೀರಿಗೆ ಬಿದ್ದು ಮೀನುಗಾರ ಮೃತಪಟ್ಟ ಘಟನೆ ಉಳಿಯಾರಗೋಳಿ ಗ್ರಾಮದ ಪೊಲಿಪು ಬಳಿ ರಾತ್ರಿ ಸಂಭವಿಸಿದೆ.
ಮೃತಪಟ್ಟ ಮೀನುಗಾರ ಉದ್ಯಾವರ ಪಿತ್ರೋಡಿ ನಿವಾಸಿ ರಾಮಾಜು ಕೋಟ್ಯಾನ್ (54) ಎಂದು ತಿಳಿಯಲಾಗಿದೆ.
ರಾಮಾಜು ಇತರ ನಾಲ್ವರೊಂದಿಗೆ ಬುಧವಾರ ರಾತ್ರಿ ಮೀನು ಹಿಡಿಯುತ್ತಿರುವಾಗ ಬಲೆಯನ್ನು ಮೇಲಕ್ಕೆ ಎಳೆಯುತ್ತಿದ್ದ ವೇಳೆ ನೀರಿಗೆ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ತತ್ಕ್ಷಣ ಮೇಲಕ್ಕೆತ್ತಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಘೋಷಿಸಿದರು. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.