ಕಾರ್ಕಳ: ಪೂಜನೀಯ ಸ್ತ್ರೀ ಕುಲಕ್ಕೆ ಗೌರವ ನೀಡದ ಕಸಗಳನ್ನು ಕಿತ್ತು ಬಿಸಾಡುವ ಕೆಲಸ ಸರಕಾರದಿಂದ ಅಗಬೇಕಾಗಿದೆ ಎಂದು ಚಿತ್ರದುರ್ಗದ ಬೋವಿ ಸಮಾಜದ ಇಮ್ಮಡಿ ಸಿದ್ಧಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಅವರು ಕಾರ್ಕಳ ಮಂಜುನಾಥ ಪೈ ಸಭಾಂಗಣದಲ್ಲಿ ಹಿಂದು ಹಿತರಕ್ಷಣಾ ಸಮಿತಿ ವತಿಯಿಂದ ನಡೆದ ಕಾರ್ಕಳ ದಲ್ಲಿ ನಡೆದ ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಖಂಡನಾ ಸಭೆಯಲ್ಲಿ ಮಾತನಾಡಿದರು.
ಯುವಕರಿಗೆ ಹೆಣ್ಣೆಂದರೆ ಭೋಗದ ವಸ್ತುವಾಗಿ ಕಾಣುತ್ತಿದೆ. ಪೂಜ್ಯನೀಯ ಭಾವನೆಗಳೆ ಹೊರಟು ಹೋಗಿದೆ. ರಾಜ್ಯದಲ್ಲಿ ಒಟ್ಟು ಒಂದು ವರ್ಷವೊಂದರಲ್ಲೆ 340 ಅತ್ಯಾಚಾರದ ಕೇಸುಗಳಿವೆ. ಕಠಿಣ ಕಾನೂನಿ ರೂಪಿಸುವ ಮೂಲಕ ಅತ್ಯಾಚಾರಕ್ಕೆ ತಾರ್ಕಿಕ ಅಂತ್ಯ ವಾಗಬೇಕು ಎಂದು ಬೇಸರ ವ್ಯಕ್ತಪಡಿಸಿದರು. ಜಾತಿಮತವೆನ್ನದೆ ಅತ್ಯಾಚಾರದ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿ ಎಂದು ಕರೆಕೊಟ್ಟರು.
ಸುನಿಲ್ ಕುಮಾರ್ ಮಾತನಾಡಿ ಪೈಶಾಚಿಕ ಕೃತ್ಯ ನಡೆದಿರುವ ಮೂಲಕ ಕಾರ್ಕಳದ ನಾಗರಿಕ ಸಮಾಜ ತಲೆತಗ್ಗಿ ಸುವಂತಾಗಿದೆ. ನಿರ್ಭಯ, ಕೇರಳ ಲವ್ ಜಿಹಾದ್, ಹುಬ್ಬಳ್ಲಿ ಸ್ನೇಹ ಕೊಲೆ ಪ್ರಕರಣ, ಬಾಂಗ್ಲಾದೇಶದ ಘಟನೆಗಳನ್ನು ಖಂಡಿಸುವ ಹೊತ್ತಿನಲ್ಲೆ ಕಾರ್ಕಳದಲ್ಲೆ ಕೃತ್ಯ ನಡೆದುಹೋಗಿದೆ. ಸರಕಾರದ ಓಲೈಕೆ ಹಾಗೂ ಮೃದು ಧೋರಣೆಗಳಿರುವವರೆಗೆ ಇಂತಹ ಕೃತ್ಯಗಳು ನಡೆಯುತ್ತಿರುತ್ತವೆ ಎಂದರು.
ಲವ್ ಜಿಹಾದ್ಗೆ ಬಲಿಯಾದವರೆಲ್ಲ ಹಿಂದೂ ಹೆಣ್ಣು ಮಕ್ಕಳು. ಹಿಜಾಬ್ ಬೇಕು ಎಂದು ಮುಸ್ಲಿಂ ಹುಡುಗಿಯರು ಕೋರ್ಟ್ಗೆ ಹೋಗಬೇಕಾದರೆ ಅದರ ವೆಚ್ಚ ಭರಿಸಿದವರು ಯಾರು ? ಅತ್ಯಾಚಾರಿ ಆರೋಪಿಗೆ ಅಮಲು ಪದಾರ್ಥ ತಂದು ಕೊಟ್ಟವರು ಯಾರು ? ಎಲ್ಲಿಂದ ದೊರಕಿತು ? ಹಿಂದಿರುವ ಷಡ್ಯಂತ್ರ ಯಾವುದು ಎಂಬುದು ತನಿಖೆಯಿಂದ ಹೊರಬೇಕು. ಹಿಜಾಬ್, ತಲಾಕ್ ವಿಷಯ ಬಂದಾಗ ಸಂವಿಧಾನ ಬೇಡ ಷರೀಯತ್ ಬೇಕು ಎನ್ನುವ ಮುಸಲ್ಮಾನರು ಇದೀಗ ಕಾರ್ಕಳದಲ್ಲಿ ಅವರದ್ದೇ ಸಮುದಾಯವರು ಹಿಂದು ಯುವತಿಯ ಮೇಲೆ ಅತ್ಯಾಚಾರ ಮಾಡಿದಾಗ ಆತ ನಮ್ಮ ಒಕ್ಕೂಟದಲ್ಲಿ ಇಲ್ಲ ಎನ್ನುತ್ತಾರೆ. ನೀವು ನಿಜವಾಗಿಯೂ ನೀವು ಷರೀಯತ್ ನಿಯಮ ಪಾಲಿಸುವರಾದರೆ ಅದರ ಕಾನೂನಿನಂತೆ ಅತ್ಯಾಚಾರ ಎಸಗಿದವರಿಗೆ ಬಂಗ್ಲೆಗುಡ್ಡೆ ಸರ್ಕಲ್ನಲ್ಲಿ ಕಲ್ಲು ಹೊಡೆಯಬೇಕು ಎಂದರು.
ವಿಶ್ವ ಹಿಂದೂ ಪರಿಷತ್ ನ ಪ್ರಾಂತೀಯ ಸಂಚಾಲಕ ಸುನೀಲ್ ಕೆ. ಆರ್. ಪ್ರಾಸ್ತಾವಿಕ ಮಾತನಾಡಿ ಕರಾವಳಿಯಲ್ಲಿ ಲವ್ ಜಿಹಾದ್, ಡ್ರಗ್ಸ್ ಮಾಫೀಯ ಮಟ್ಟಹಾಕಬೇಕಿದೆ. ಅಧರ್ಮದ ವಿರುದ್ಧದ ಧರ್ಮದ ಹೋರಾಟವಾಗಿದೆ. ಡ್ರಗ್ಸ್ ಹಾಗೂ ಲವ್ ಜಿಹಾದ್ ವಿರುದ್ಧ ಕಾರ್ಯಾಚರಣೆ ನಡೆಸಲು ಸರಕಾರವು ತನಿಖಾ ತಂಡ ರಚಿಸುವಂತೆ ಮನವಿ ಮಾಡಿದರು.
ವಿಶ್ರಾಂತ ಪ್ರಾಂಶುಪಾಲೆ ಮಿತ್ರ ಪ್ರಭಾ ಹೆಗ್ಡೆ, ಉದ್ಯಮಿ ಮಹೇಶ್ ಶೆಟ್ಟಿ ಕುಡುಪುಲಾಜೆ ಮಾತನಾಡಿದರು.
ಮುಖಂಡರಾದ ಮುನಿಯಪ್ಪ ದೊಡ್ಡ ಹಳ್ಳಿ, ಜಾಗರಣ ವೇದಿಕೆಯ ಪ್ರಮುಖರಾದ ಶಂಕರ ಕೋಟ ಉಪಸ್ಥಿತರಿದ್ದರು. ಮನೀಶ್ ಶೆಟ್ಟಿ ಸ್ವಾಗತಿಸಿದರು.
ಸಭೆಯ ಮೊದಲು ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ನಡೆದ ರ್ಯಾಲಿಯು ಕಾರ್ಕಳ ಅನಂತ ಶಯನದಿಂದ ಬಸ್ನಿಲ್ದಾಣ, ವೆಂಕಟರಮಣ ದೇವಾಲಯ ಮಾರ್ಗವಾಗಿ ಮಂಜುನಾಥ ಪೈ ಸಭಾಂಗಣದ ವರೆಗೆ ಹಿಂದೂ ಕಾರ್ಯಕರ್ತರು ಲವ್ ಜಿಹಾದ್ ವಿರುದ್ಧ ಅತ್ಯಾಚಾರ ಗೈದ ಆರೋಪಿಗಳನ್ನು ಗಲ್ಲಿಗೇರಿಸಲು ಘೋಷಣೆ ಕೂಗಿದರು.
ಆಗಸ್ಟ್ 23 ರಂದು ಕಾರ್ಕಳದ ರಂಗನಪಲ್ಕೆಯಲ್ಲಿ ನಡೆದ ಬಡ ಯುವತಿಯ ಅತ್ಯಾಚಾರ ಪ್ರಕರಣವನ್ನು ಉಡುಪಿ ಜಿಲ್ಲಾ ಕೊರಗ ಸಂಘವು ತೀವೃವಾಗಿ ಖಂಡಿಸುತ್ತದೆ. ಹಾಗೂ ಈ ಸಂಬಂಧ ಕರ್ನಾಟಕ ಬೋವಿ ಸಮಾಜ ಸಂಘಟನೆಯು ನಡೆಸುತ್ತಿರುವ ಹೋರಾಟಕ್ಕೆ ನೈತಿಕ ಬೆಂಬಲವನ್ನು ಸೂಚಿಸುತ್ತೇವೆ. ಸಮಾಜ ಘಾತುಕರ ವಿರುದ್ಧ ಪೋಲೀಸರು ನಿರ್ಧಾಕ್ಷಿಣ್ಯ ಕ್ರಮಕ್ಕಾಗಿ ಕೊರಗರ ಜಿಲ್ಲಾ ಸಂಘವು ಆಗ್ರಹಿಸುತ್ತದೆ. ಎಂದು ಕೊರಗರ ಜಿಲ್ಲಾ ಸಂಘದ ಅಧ್ಯಕ್ಷರು ಗೌರಿ ಕೊರಗ ತಿಳಿಸಿದ್ದಾರೆ.