ಕಂಬಳ ಅಭಿಮಾನಿಗಳಿಗೆ ಗುಡ್ ನ್ಯೂಸ್: 2024-25ರ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟ.

ಮೂಡುಬಿದಿರೆ: 2024-25ರ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟವಾಗಿದ್ದು, ಕಂಬಳ ಸೀಸನ್‌ ಅಕ್ಟೋಬರ್‌ 26 ರಿಂದ 2025ರ ಏಪ್ರಿಲ್‌ 19ರವರೆಗೆ ನಡೆಯಲಿದೆ.

ಹೋದ ಸಲ ಬೆಂಗಳೂರು ಅರಮನೆ ಮೈದಾನದಲ್ಲಿ ಕಂಬಳ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಬಾರಿ ಮಲೆನಾಡು ಭಾಗದ ಶಿವಮೊಗ್ಗದಲ್ಲಿ ಕಂಬಳ ನಡೆಸಲು ತೀರ್ಮಾನಿಸಲಾಗಿದೆ. ಈ ಸೀಸನ್‌ ನ ಮೊದಲ ಕಂಬಳ ಬೆಂಗಳೂರಿನಲ್ಲಿ ನಡೆದರೆ, ಅಂತಿಮ ಕಂಬಳವು ಶಿವಮೊಗ್ಗದಲ್ಲಿ ನಡೆಯಲಿದೆ.

ಮೂಡುಬಿದಿರೆಯಲ್ಲಿ ಶನಿವಾರ (ಆ.10) ನಡೆದ ಜಿಲ್ಲಾ ಕಂಬಳ ಸಮಿತಿಯ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. 2024-25ರ ಕಂಬಳ ಸೀಸನ್‌ ಅಕ್ಟೋಬರ್‌ 26ರಂದು ಆರಂಭವಾಗಿ 2025ರ ಏಪ್ರಿಲ್‌ 19ರವರೆಗೆ ನಡೆಯಲಿದೆ.

ಈ ಬಾರಿ ಮಲೆನಾಡು ಭಾಗದ ಶಿವಮೊಗ್ಗದಲ್ಲೂ ಕಂಬಳ:
ಕರಾವಳಿಯ ಪ್ರಮುಖ ಜಾನಪದ ಕ್ರೀಡೆಯಾಗಿರುವ ಕಂಬಳವನ್ನು ಕಳೆದ ವರ್ಷ ಬೆಂಗಳೂರಿನಲ್ಲಿ ನಡೆಸಲಾಗಿತ್ತು. ಜತೆಗೆ ಇತರ ಕಡೆಗಳಲ್ಲೂ ಕಂಬಳ ಆಯೋಜನೆಗೆ ಒಲವು ವ್ಯಕ್ತವಾಗಿದೆ. ಅದರಂತೆ ಶಿವಮೊಗ್ಗದಲ್ಲಿ ಈ ಬಾರಿ ಕಂಬಳ ನಡೆಸಲು ಅಲ್ಲಿನ ಉದ್ಯಮಿಗಳು, ಕರಾವಳಿ ಭಾಗದ ಪ್ರಮುಖರು ಹಾಗೂ ಇತರರು ಆಸಕ್ತಿ ತೋರಿದ್ದಾರೆ.

ಪಿಲಿಕುಳ ಕಂಬಳ ಆರಂಭ:
ಕರಾವಳಿಯಲ್ಲಿ ಸರಕಾರಿ ಪ್ರಾಯೋಜಕತ್ವದಲ್ಲಿ ಹಿಂದೆ ನಡೆಯುತ್ತಿದ್ದ ಪಿಲಿಕುಳ ಕಂಬಳ ಈ ಬಾರಿ ಮತ್ತೆ ಆರಂಭವಾಗುತ್ತಿದೆ. ನವೆಂಬರ್‌ 9ರಂದು ಪಿಲಿಕುಳದಲ್ಲಿ ಕಂಬಳ ಆಯೋಜನೆಗೆ ನಿರ್ಧರಿಸಲಾಗಿದೆ.

2024-25 ನೇ ಸಾಲಿನ ಕಂಬಳ ದಿನಾಂಕದ ವೇಳಾಪಟ್ಟಿ:

26.10.2024 ಬೆಂಗಳೂರು

09.11.2024 – ಪಿಲಿಕುಲ
16.11.2024 – ಪಣಪಿಲ
23.11.2024 – ಕೊಡಂಗೆ
30.11.2024 – ಕಕ್ಯಪದವು

07.12.2025 – ಹೊಕ್ಕಡಿಗೋಳಿ
14.12.2024 – ಬಾರಾಡಿ
21.12.2024 – ಮೂಲ್ಕಿ
28.12.2024 – ಮಂಗಳೂರು

04.012025 – ಮಿಯ್ಯಾರು
11.01.2025 – ನರಿಂಗಾನ
18.01.2025 – ಅಡ್ವೆ
25.01.2025 – ಮೂಡಬಿದ್ರೆ

01.02.2025 – ಐಕಳ
08.02.2025 – ಜಪ್ಪು
15.02.2025 – ತಿರುವೈಲುಗುತ್ತು
22.02.2025 – ಕಟಪಾಡಿ

01.03.2025 – ಪುತ್ತೂರು
08.03.2025 – ಬಂಗಾಡಿ
15.03.2025 – ಬಂಟ್ವಾಳ
22.03.2025 – ಉಪ್ಪಿನಂಗಡಿ
29.03.2025 ವೇಣೂರು

05.04.2025 – ಬಳ್ಕುಂಜೆ
12.04.2025 – ಗುರುಪುರ
19.04.2025 – ಶಿವಮೊಗ್ಗ