ಎಲಿಯಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮೃತ ಮಹೋತ್ಸವ ಸಂಭ್ರಮ.

ಬೈಲೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಲಿಯಾಳದ ಇದರ ಅಮೃತ ಮಹೋತ್ಸವ ಸಮಾರಂಭ ಹಾಗೂ ನೂತನ ರಂಗಮಂದಿರ ಉದ್ಘಾಟನಾ ಸಮಾರಂಭವು ಫೆ.17 ರಂದು ನಡೆಯಿತು.

ಕಣಂಜಾರು ಲೂರ್ದ್ ಮಾತೆಯ ದೇವಾಲಯದಸ ಧರ್ಮಗುರುಗಳಾದ ರೆ| ಫಾ| ದರ್ ಹೆರಾಲ್ಡ್ ಪಿರೇರಾ ನೂತನ ರಂಗಮಂದಿರವನ್ನು ಉದ್ಘಾಟಿಸಿ ದಾನಿಗಳ ಸಹಕಾರದಿಂದ ಶಾಲೆಯು ಅಭಿವೃದ್ಧಿಗೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಶಾಲೆಯ ಇನ್ನಷ್ಟು ಬೇಡಿಕೆಗಳು ದಾನಿಗಳ ಸಹಕಾರದಿಂದ ಇಡೇರಲಿ ಅಮೃತಮಹೋತ್ಸವವು ಅರ್ಥಪೂರ್ಣವಾಗಿ ನಡೆಯುತ್ತಿದ್ದು ಶತಮನೋತ್ಸವನ್ನು ಅದ್ದೂರಿಯಲ್ಲಿ ಅಚರಿಸುವಂತಾಗಲಿ ಎಂದು ಶುಭ ಹಾರೈಸಿದರು.

ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಜಯಾನಂದ ಅಮೀನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ರಂಗಮಂದಿರದ ದಾನಿಗಳಾದ ಲಾರೆನ್ ಸಲ್ದಾನ, ಶ್ರೀ ಕ್ಷೇತ್ರ ಅಡಪಾಡಿಯ ಧರ್ಮದರ್ಶಿಗಳಾದ ಪುಂಡಲೀಕ್ ನಾಯಕ್, ಕೌಡೂರು ಶ್ರೀ ಮಹಾಲೀಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಭಗೀರಥ ಭಟ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಸವಿತಾ ಕೋಟ್ಯಾನ್, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಮಾಲಿನಿ ಜೆ. ಶೆಟಿ, ನಿಕಟಪೂರ್ವ ಸದಸ್ಯರಾದ ಶ್ರೀಮತಿ ನಿರ್ಮಲ, ಬೈಲೂರು ಗ್ರಾಮ ಪಂಚಾಯತ್ ಸದಸ್ಯರಾದ ವಿಶ್ವೇಶ್ವರ ದೇವಾಡಿಗ, ಶಶಿಕುಮಾರ್, ಶಾಂತ ನಾಯಕ್, ಉದಯ ನಾಯಕ್, ಬೈಲೂರು ಸಮುಹ ಸಂಪನ್ಮೂಲ ವ್ಯಕ್ತಿ ಉಮೇಶ್ ನಾಯಕ್, ಪಡುತಿರುಪತಿ ಕ್ಯಾಶ್ಯೂಸ್‌ನ ಶ್ರೀಮತಿ ಮಯಾ ರಘುಪತಿ ಪೈ. ಹೊಸಬೆಳಕು ಸೇವಾಶ್ರಮದ ಸಂಸ್ಥಾಪಕರಾದ ಶ್ರೀಮತಿ ತನುಲಾ ತರುಣ್, ಜೆರಾಲ್ಡ್ ಡಿಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಅಮೃತಮಹೋತ್ಸವ ಸಮಿತಿ ಅಧ್ಯಕ್ಷರಾದ ಜಗದೀಶ್ ತೆಂಡ್ಲೂಲ್ಕರ್, ಕಾರ್ಯಾಧ್ಯಕ್ಷರಾದ ಆಕಾಶ್ ಶಟ್ಟಿ, ಕಾರ್ಯದರ್ಶಿ ಸುರೇಶ್ ಕುಮಾರ್, ಕೋಶಾಧಿಕಾರಿ ರಾಘವೇಂದ್ರ ಪೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮೇಶ್ ಕುಲಾಲ್, ಕಾರ್ಯದರ್ಶಿ ಪ್ರಜ್ವಲ್ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ, ಶಾಲಾ ವಿದ್ಯಾರ್ಥಿ ನಾಯಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಗೌರವ ಶಿಕ್ಷಕರನ್ನು, ಜನಪ್ರತಿನಿಧಿಗಳನ್ನು, ಅಡುಗೆಯವರನ್ನು, ಶಾಲಾ ಎಸ್.ಡಿ.ಎಂ.ಸಿ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಶ್ರೀಕಾಂತ್ ಪ್ರಭು ನಿರೂಪಿಸಿದರು, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪ್ರೇಮ ಸ್ವಾಗತಿಸಿದರು. ಸಹ ಶಿಕ್ಷಕಿ ಶ್ರೀಮತಿ ಸುರೇಖಾ ಪಿ. ವಂದಿಸಿದರು.