ಎಮ್.ಐ.ಟಿ.(MIT)ಯ ಸೀನಿಯರ್ ಟೆಕ್ನಿಷಿಯನ್ ಮುಂಡ್ಕಿನಜೆಡ್ಡು ರವೀಂದ್ರ ಆಚಾರ್ಯ ನಿಧನ

ಚೇರ್ಕಾಡಿ ಮುಂಡ್ಕಿನಜೆಡ್ಡು ನಿವಾಸಿ ಎಂಐಟಿ ಯ(MIT) ಸೀನಿಯರ್ ಟೆಕ್ನಿಷಿಯನ್ ರವೀಂದ್ರ ಆಚಾರ್ಯ (55) ಅವರು ನವೆಂಬರ್ 24 ರಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ತಾಯಿ, ಪತ್ನಿ, ಮತ್ತು ಪುತ್ರನನ್ನು ಅಗಲಿದ್ದಾರೆ.

ಇವರು ಬಾರ್ಕೂರು ಕಾಳಿಕಾಂಬ ದೇವಸ್ಥಾನ ಕೂಡುವಳಿಕೆಯ ಚೇರ್ಕಾಡಿ ಗ್ರಾಮ‌ ಮೋಕ್ತೆಸರರಾಗಿದ್ದರು.

ಮುಂಡ್ಕಿನಜೆಡ್ಡು ಗೋಪಾಲಕೃಷ್ಣ ಭಜನಾ ಮಂದಿರದ ಮತ್ತು ಶಾರದಾ ಸ್ಪೋರ್ಟ್ಸ್ ಕ್ಲಬ್ ನ ಮಾಜಿ ಅಧ್ಯಕ್ಷ ರಾಗಿದ್ದು, ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.