ಮಂಗಳೂರು : ಮಂಗಳೂರಿನ ಎಕ್ಸ್ಪರ್ಟ್ ಕೋಚಿಂಗ್ ಕ್ಲಾಸಸ್ನಲ್ಲಿ ನೀಟ್ ದೀರ್ಘಾವಧಿ ಕೋಚಿಂಗ್ ಪಡೆದ ಶೇ.98.37ರಷ್ಟು ವಿದ್ಯಾರ್ಥಿಗಳು
ವೈದ್ಯಕೀಯ ಶಿಕ್ಷಣ ಪ್ರವೇಶ ಪಡೆಯಲು ಅರ್ಹತೆ
ಪಡೆಯುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ. 675ಕ್ಕಿಂತ ಅಧಿಕ ಅಂಕವನ್ನು 2 ವಿದ್ಯಾರ್ಥಿಗಳು, 650ಕ್ಕಿಂತ ಅಧಿಕ ಅಂಕವನ್ನು 8 ವಿದ್ಯಾರ್ಥಿಗಳು, 625ಕ್ಕಿಂತ ಅಧಿಕ ಅಂಕವನ್ನು 19 ವಿದ್ಯಾರ್ಥಿಗಳು, 600ಕ್ಕಿಂತ ಅಧಿಕ ಅಂಕವನ್ನು 36
ವಿದ್ಯಾರ್ಥಿಗಳು, 575ಕ್ಕಿಂತ ಅಧಿಕ ಅಂಕವನ್ನು 56 ವಿದ್ಯಾರ್ಥಿಗಳು, 550ಕ್ಕಿಂತ ಅಧಿಕ ಅಂಕವನ್ನು 75 ವಿದ್ಯಾರ್ಥಿಗಳು, 525ಕ್ಕಿಂತ ಅಧಿಕ ಅಂಕವನ್ನು 89 ವಿದ್ಯಾರ್ಥಿಗಳು, 500ಕ್ಕಿಂತ ಅಧಿಕ ಅಂಕವನ್ನು 112
ವಿದ್ಯಾರ್ಥಿಗಳು, 475ಕ್ಕಿಂತ ಅಧಿಕ ಅಂಕವನ್ನು 132, 450ಕ್ಕಿಂತ ಅಧಿಕ ಅಂಕವನ್ನು 152, 425ಕ್ಕಿಂತ ಅಧಿಕ ಅಂಕವನ್ನು 167, 400ಕ್ಕಿಂತ ಅಧಿಕ ಅಂಕವನ್ನು 189 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ಕಳೆದ ಬಾರಿ ಅಂದರೆ ನೀಟ್ 2023ರ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದು, ವೈದ್ಯಕೀಯ ಶಿಕ್ಷಣ ಪ್ರವೇಶದಿಂದ ವಂಚಿತರಾದ ಮತ್ತು ತಮಗೆ ಬೇಕಾದ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಸಿಗದ, ಪದವಿ ಪೂರ್ವ ಶಿಕ್ಷಣವನ್ನು ಎಕ್ಸ್ಪರ್ಟ್ ಹೊರತು ಪಡಿಸಿ ಬೇರೆ ಕಾಲೇಜುಗಳಲ್ಲಿ ಕಲಿತ ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳು ಎಕ್ಸ್ಪರ್ಟ್ ನಿಂದ ಕೋಚಿಂಗ್ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.
ಪಿಯು ಪರೀಕ್ಷೆಯೊಂದಿಗೆ ಇತರ ಸ್ಪರ್ಧಾತ್ಮಕ
ಪರೀಕ್ಷೆಗಳ ತಯಾರಿ ಬೇಕಾಗಿದ್ದು ನೀಟ್ ಪರೀಕ್ಷೆಯಲ್ಲಿ ಪೂರ್ಣ ಪ್ರಮಾಣದಲ್ಲಿ ನಿರೀಕ್ಷಿತ ಯಶಸ್ಸು ಕೆಲವೊಂದು ವಿದ್ಯಾರ್ಥಿಗಳಿಗೆ ಪ್ರಥಮ ಅವಕಾಶದಲ್ಲಿ ಸಿಗುವುದಿಲ್ಲ. ಈ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಅಧ್ಯಯನದ ಕನಸು ಕಮರಿ ಹೋಗಬಾರದು ಎಂಬ ಸದುದ್ದೇಶದಿಂದ ಕಳೆದ 3 ದಶಕಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿರುವ ಎಕ್ಸ್ಪರ್ಟ್ ಸಂಸ್ಥೆಯು 2016ರಲ್ಲಿ ನೀಟ್
ಲಾಂಗ್ ಟರ್ಮ್ ಕೋಚಿಂಗ್ ಆರಂಭಿಸಿತ್ತು.
ಅತ್ಯುತ್ತಮ ಸಾಧನೆ ಮಾಡಿದ ಈ ವರ್ಷ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳ ವಿವರ: (ಆವರಣದಲ್ಲಿ ಕಳೆದ ವರ್ಷದ ಅಂಕ)
ಚಿರಾಗ್ ಎಂ. ಯಲಿಗಾರ್ 691 (426), ಸುಜನ್ ಕೃಷ್ಣಮೂರ್ತಿಫಟ್ಟಾಪರ್ 674 (485), ನಾಜಿಯನೂರಿಯನ್ ಅಶ್ಫಾಕ್ಮದ್
ಪನ್ಫರೋಶ್ 666 (400), ಮನೀಶ್ ರಮೇಶ ಪಟ್ಟಣಶೆಟ್ಟಿ 662 (423), ಖಾದರ್ ಭಾಷಾ ಮುಕ್ಕುಂದ 658 (251), ಆದಿತ್ಯ ಗೌಡ ಆರ್.
ಕಲ್ಲನಗೌಡರ್ 656 (389), ತಕ್ಷೀಲ್ ಡಿ ಶೆಟ್ಟಿ 651 (469), ಸಾಹಿತ್ಯ ಆರ್.ಶೆಟ್ಟಿ 650 (305), ಹರ್ಷಿತ್ ಗೌಡ ಎನ್. 646 (384), ಪ್ರತೀಕ್ ಅಶೋಕ್
ಮುದರೆಡ್ಡಿ 645 (411), ಸುಶ್ಮಿತಾ ಎಸ್. ಶೆಣೈ 641 (360), ಅಕ್ಷಯ್ ಅಶೋಕ್ ನಾಯಕ್ 640 (413), ರಿಚಿತಾ ಸಿರಿ ಐ.ಆರ್. 634 (471), ಅನುಷ ಎನ್.
ಮೋಹಿತೆ 631 (450), ರಿಷಿ ಡಿ. 629 (367), ಎಸ್.ಅಮೃತ ವರ್ಷಿಣಿ 629 (371), ಐಶ್ವರ್ಯ ಆರ್. 625 (407), ಅನುಶ್ರೀ ಶೆಟ್ಟಿ 625 (369), ಧೀಮಂತ್ ಟಿ.ನಾಯ್ಕ್ 625 (446), ಪ್ರೇಕ್ಷಾ ಎಫ್. ಚೌಗಲ್ 624 (225), ನಯನಾ ಜೆ. 624 (460), ಮಲ್ಲಿಕಾರ್ಜುನ ಬಸಲಿಂಗಪ್ಪ ಮಸೂತಿ 623 (437), ಓಂ
ಸಂಜಯ್ ಪಾಟೀಲ್ 623 (435), ಅಕ್ಷರ ವಿ. ನರಹರಿ 621(389), ಭೂಮಿಕಾ ಯು. ನವಲಿಹಿರೇಮಠ 620 (421), ಪಾಯಲ್ ಕೆ.ಎಸ್. 620 (302),
ತಕ್ಕಣ ಸೃಷ್ಟಿ ಶೆಟ್ಟಿ 619 (350), ಟಾಕೂರ್ ಗೌಡ ಎಚ್.ಎಂ. 618 (398), ಜಿ.ಎಸ್. ಹರ್ಷ 618 (404), ಹೇಮಂತ್ ಬಿ.ಎನ್. 617 (193), ಮೊಹಮ್ಮದ್
ತ್ವರೀಕ್ 615 (441), ಪೃಥ್ವಿರಾಜ್ ಕೆ. 610 (156), ತನಿಶಾ ರೈ 605 (462), ಕುಶಾಲ್ ರಾಜ್ 603 (438), ವೈಷ್ಣವ್ ಜಿ. 603 (518), ಸೃಜನ್ ಕೆ. ಗೌಡ 600
(434) ಅಂಕ ಗಳಿಸಿದ್ದಾರೆ.
ಕಳೆದ ವರ್ಷ ದೀರ್ಘಾವಧಿ ನೀಟ್ ಕೋಚಿಂಗ್ಗೆ ಸೇರಿದ ಶೇ.90ರಷ್ಟು ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ದೊರೆತಿದೆ. ಈ ವರ್ಷವೂ ಅತ್ಯುತ್ತಮ ಫಲಿತಾಂಶ ಬಂದಿದ್ದು, ಬಹುತೇಕ ವಿದ್ಯಾರ್ಥಿಗಳಿಗೆ ವೈದ್ಯಕೀಯ
ಶಿಕ್ಷಣ ಸಂಸ್ಥೆಗಳ ಪ್ರವೇಶ ಸಿಗುವುದು ಖಚಿತ ಹಾಗೂ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ
ಪ್ರೊ.ನರೇಂದ್ರ ಎಲ್. ನಾಯಕ್ ಅಭಿನಂದಿಸಿದ್ದಾರೆ.