ಎಂಜೆಸಿ ಅಮೃತ ಮಹೋತ್ಸವ ಪೂರ್ವಭಾವಿ ಸಭೆ

ಮಣಿಪಾಲ: ಮಣಿಪಾಲ ಪದವಿ ಪೂರ್ವ ಕಾಲೇಜು (ಎಂಜೆಸಿ) ಇದರ ಅಮೃತ ಮಹೋತ್ಸವವನ್ನು ಡಿಸೆಂಬರ್ 27ರಿಂದ 30ರವರೆಗೆ ಆಚರಿಸಲಾಗುತ್ತಿದೆ.

ಸಮಾರಂಭವನ್ನು ಅದ್ದೂರಿಯಾಗಿ ಹಾಗು ಅರ್ಥಪೂರ್ಣವಾಗಿ ಆಚರಿಸಲು ಡಿಸೆಂಬರ್ 3, ರವಿವಾರದಂದು ಸಂಜೆ ಗಂಟೆ 4ಕ್ಕೆ ಕಾಲೇಜಿನ ಸಭಾಂಗಣದಲ್ಲಿ ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಾಲಾಭಿಮಾನಿಗಳ ಸಭೆಯನ್ನು ಕರೆಯಲಾಗಿದೆ. ಎಲ್ಲರೂ ಸಭೆಗೆ ಆಗಮಿಸುವಂತೆ ಶಾಲಾ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.