ಉಡುಪಿ: ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸರಪೋಜಿತ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಾಗಾಲೆಯದ ಶ್ರೀ ನಾಗರಾಜ ನಾಗರಾಣಿಯರ ಸನ್ನಿಧಾನದಲ್ಲಿ ಬಹು ವಿಶೇಷವಾದ ನಾಗತನು ತರ್ಪಣಾ ಮಂಡಲ ಸೇವೆಯು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ವಿಖ್ಯಾತ್ ಭಟ್ ನೇತೃತ್ವದಲ್ಲಿ ಬಹು ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಆ ಪ್ರಯುಕ್ತ ನಾಗಾಲಯದಲ್ಲಿ ಲೋಕಕಲಶ ಪ್ರಧಾನ ಹೋಮ ಕೆಲಸ ಅಭಿಷೇಕ ಸುಬ್ರಮಣ್ಯದ ಸನ್ನಿಧಾನದಲ್ಲಿ ಪವಮಾನ ಸೂಕ್ತ ಕಲಶಾಭಿಷೇಕ ಪ್ರಸನ್ನ ಪೂಜೆಗಳು ನೆರವೇರಿತು..
ಸಂಜೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ದೀಪ ಪ್ರಜ್ವಲಿಸಿ ಈ ಮಹಾನ್ ಪೂಜೆಗೆ ಸಾಂಪ್ರದಾಯಿಕ ಚಾಲನೆ ನೀಡಿದರು.
ಕ್ಷೇತ್ರದಲ್ಲಿ ಪಂಚವರ್ಣಾತ್ಮಕವಾಗಿ ರಚಿಸಲಾದ ಬೃಹತ್ ಮಂಡಲದಲ್ಲಿ ಆಶ್ಲೇಷ ಬಲಿದಾನ ಸಹಿತವಾದ ತನು ತರ್ಪಣ ಮಂಡಲ ಪೂಜೆಯು ನೆರವೇರಿತು…
ಅನುಕ್ರಮಣಿಕೆಯನ್ನು ಸತೀಶ್ ಮರಾಠೆ, ನೆರವೇರಿಸಿದರು..ಆಕರ್ಷಣೀಯವಾದ ವ್ರತ್ ಮಂಡಲ ರಚನೆಯನ್ನು ಉಪೇಂದ್ರ ಮಾರ್ನಾಡು ವಿಪ್ರರ ಸಹಕಾರದೊಂದಿಗೆ ರಚಿಸಿದರು. ಶ್ರೀ ಚೇತನ್ ಭಟ್, ವಿಜೇತ್ ಭಟ್ ಪ್ರಶಾಂತ್ ಭಟ್ ಅನಿಷ ಆಚಾರ್ಯ, ಸಹಕರಿಸಿದರು.. ಸ್ವಸ್ತಿಕ್ ಆಚಾರ್ಯ ರಾತ್ರಿಯ ಪೂಜೆ ನೆರವೇರಿಸಿದರು.
ಕಲ್ಲಂಗಳ ರಾಮಚಂದ್ರ ಕುಂಚಿ ತಾಯ ಅವರಿಂದ ನಾಗ ಸಂದರ್ಶನ ನೆರವೇರಿತು.ನಾಗೇಂದ್ರ ಕುಡುಪು ಮತ್ತು ತಂಡದವರಿಂದ ವಿಶೇಷವಾದ ಹುಡುಕಿ ವಾದನ ಸೇವೆ ಮುರಳಿದರ ಮುದ್ರಾಡಿ ಮತ್ತು ತಂಡದವರಿದ ನಾಗಸ್ವರ ವಾದನ ನೆರವೇರಿತು..
ಬಹು ವಿಶಿಷ್ಟವೂ ಅಪರೂಪವು ಸರ್ವ ನಾಗದೋಷ ಪರಿಹಾರವಾಗಿ ಸಮರ್ಪಿಸಲ್ಪಡುವ ಈ ಮಹಾನ್ ಪೂಜೆಯು ಕಾರ್ಕಳ ಮಿಯಾರಿನ ಶ್ರೀಯುತ ವೀರಜಿ ಶೆಟ್ಟಿ ಮತ್ತು ಮನೆಯವರ ಪ್ರಯುಕ್ತ ಕೃತಜ್ಞತಾ ಪೂರ್ವಕವಾಗಿ ಕ್ಷೇತ್ರಕ್ಕೆ ಸಮರ್ಪಿಸಲ್ಪಟ್ಟಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ..