ಉಡುಪಿ:ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಜೋಡಿ ಚಂಡಿಕಾಯಾಗ ಸಂಪನ್ನ

ಉಡುಪಿ: ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶರನ್ನವರಾತ್ರಿಯ 4ನೇ ದಿನವೂ ಕೂಡ ಜೋಡಿ ಚಂಡಿಕಾ ಯಾಗ ಸಂಪನ್ನಗೊಂಡಿತು.

ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಹಾಗೂ ನೇತೃತ್ವದಲ್ಲಿ ಮುಂಬೈಯ ಸಂತೋಷ್ ಜನ್ನ ಮತ್ತು ಶ್ರೀಮತಿ ರಜಿತಾ ಸಂತೋಷ್ ಜನ್ನಾ ದಂಪತಿಗಳು ಹಾಗೂ ಶಿವಮೊಗ್ಗದ ಶ್ರೀ ಸುದೀಪ್ ಮತ್ತು ಶ್ರೀಮತಿ ಪ್ರೀತಿ ಸುದೀಪ್ ದಂಪತಿಗಳಿಂದ ಕೃತಜ್ಞತಾ ಪೂರ್ವಕವಾಗಿ ಈ ಸೇವೆ ಏಕಕಾಲದಲ್ಲಿ ಸಮರ್ಪಿಸಲ್ಪಟ್ಟಿತು.. ಪಂಚ ದುರ್ಗ ನಮಸ್ಕಾರವೂ ಕೂಡ ಮಂಗಳೂರಿನ ಶ್ರೀ ಉದಯ ಕುಮಾರ್ ಶೆಟ್ಟಿ ಹಾಗೂ ಶ್ರೀಮತಿ ಅಕ್ಷತಾ ಉದಯ್ ಕುಮಾರ್ ಶೆಟ್ಟಿ ದಂಪತಿಗಳಿಂದ ಕ್ಷೇತ್ರಕ್ಕೆ ಸಮರ್ಪಣೆಗೊಂಡಿತು…

ಪ್ರಾತಕ್ಕಾಲಾ ದೇವಿಯ ಉತ್ಸವ ಬಿಂಬವನ್ನು ದೇವತಾ ಪ್ರಾರ್ಥನೆಯೊಂದಿಗೆ ಮಂಗಳವಾದ್ಯನಾದದೊಂದಿಗೆ ದೀಪ ಸಹಿತವಾಗಿ ಯಾಗ ಮಂಟಪಕ್ಕೆ ಬರಮಾಡಿಕೊಳ್ಳಲಾಗುತ್ತದೆ ನಂತರ ಶೃಂಗರಿಸಿದ ತೊಟ್ಟಿಲಲ್ಲಿ ಕುಳ್ಳಿರಿಸಿ ವೇದ ಮಂತ್ರಘೋಷಗಳಿಂದ ಆಕೆಯನ್ನು ಸ್ತುತಿಸಿ ನಂತರ ಯಾಗವನ್ನು ಆರಂಭಿಸಲಾಗುತ್ತದೆ..

ಗಾನ ನಾಟ್ಯ ನಾದ ಪ್ರಿಯಲೆಂದು ಖ್ಯಾತಿ ಹೊಂದಿರುವ ಶ್ರೀ ಶಕ್ತಿಮಾತೆಯ ಸನ್ನಿಧಾನದಲ್ಲಿ ಕಲಾವಿದರ ದಂಡು ಪ್ರಾತಃಕಾಲದಿಂದಲೇ ಕ್ಷೇತ್ರಕ್ಕೆ ಆಗಮಿಸಿತ್ತು.. ಮಧ್ಯಾಹ್ನದ ಮಹಾಪೂಜೆಯ ನಂತರ ದುರ್ಗಾದಿ ಶಕ್ತಿ ದೇವಿಗೆ ಅಭಿಮುಖವಾಗಿ ನೃತ್ಯ ಸೇವೆಯನ್ನು ಸಮರ್ಪಿಸಲಾಗುತ್ತದೆ ಕ್ಷೇತ್ರದ ನವ ಶ ಕ್ತಿ ವೇದಿಕೆಯಲ್ಲಿ ಸಕ್ರಿ ಗಣೇಶ್ ನಾಯಕ್ ಮತ್ತು ತಂಡದವರಿಂದ ಭಜನೆ ಸಂಕೇತನೆ ಶ್ರೀರಾಮ ಭಜನಾ ಮಂಡಳಿ ಸಾಲಿಗ್ರಾಮ ಅವರಿಂದ ಭಜನೆ ಸಂಕೇತನೆ ಪ್ರೀತಮ್ ಮತ್ತು ಬಳಗದವರಿಂದ ಹಾಗೂ ಕ್ರೇಜಿ ಕಿಡ್ಸ್ ಪರ್ಕಳ ಇವರಿಂದ ವಿವಿಧ ಮನೋರಂಜನ ಕಾರ್ಯಕ್ರಮಗಳು ವಿದುಷಿ ಧನ್ಯಶ್ರೀ ಅವರ ಕಲಾರ್ಗ್ಯ ತಂಡದಿಂದ ನೃತ್ಯ ವೈಭವ, ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮೂಡಿ ಬಂತು.

ಕ್ಷೇತ್ರದ ಅಲಂಕಾರ ತಜ್ಞ ಆನಂದ್ ಬಾಯಿರಿ ಶ್ರೀ ದುರ್ಗಾ ಆದಿಶಕ್ತಿ ದೇವಿಯನ್ನು ಹೂವಿನ ಮಂಟಪದೊಳಗೆ ವಿರಾಜಮಾನವಾಗುವಂತೆ ಸರ್ವಾಲಂಕಾರ ಬೂಷಿತಳಾಗಿ ಅಲಂಕರಿಸಿದ್ದರು ಅರ್ಚಕ ಅನಿಷ ಆಚಾರ್ಯ ಮಹಾಪೂಜೆ ನೆರವೇರಿಸಿದರು ಕಲಾವಿದರನ್ನು ಶ್ರೀ ಗುರೂಜಿಯವರು ಗೌರವಿಸಿ ಸನ್ಮಾನಿಸಿದರು..

ಮಧ್ಯಾಹ್ನ ನೆರವೇರಿದ ಮಹಾಪ್ರಸಾದದಲ್ಲಿ ಮೂರು ಸಾವಿರಕ್ಕೂ ಮಿಕ್ಕಿದ ಭಕ್ತರುಗಳು ಪ್ರಸಾದ ಸ್ವೀಕರಿಸಿದರು….

ಈ ಪರ್ವಕಾಲದಲ್ಲಿ ತನ್ನ ಕಾರಣಿಕದಿಂದ ಮೆರೆಯುವ ಶಕ್ತಿಮಾತನೆಯ ದರ್ಶನಕ್ಕಾಗಿ ಬರುವ ಭಕ್ತಾದಿಗಳ ಸಂಖ್ಯೆ ಸಹಸ್ರೋಪಾದಿಯಲ್ಲಿ ಏರಿಕೆ ಕಂಡಿದ್ದು ಅನ್ನಪ್ರಸಾದಕ್ಕಾಗಿ ಹಾಗೂ ಸೇವಾ ಸಂಕಲ್ಪಾಗಿ ಸೂಕ್ತ ವ್ಯವಸ್ಥೆಯನ್ನು ಕ್ಷೇತ್ರದಲ್ಲಿ ಕಲ್ಪಿಸಲಾಗಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ..