ಉಡುಪಿಯ ಸರಕಾರಿ ಜಿಮ್ ನಲ್ಲಿ ಹೊಡೆದಾಟ- ದೂರು ಪ್ರತಿ ದೂರು ದಾಖಲು

ಉಡುಪಿ:ಪ್ರದೀಪ್‌ ಸ್ಯಾಮುವೆಲ್‌ (45) ಉದ್ಯಾವರ, ಉಡುಪಿ ಇವರು ದಿನಾಂಕ:31/12/2024 ರಂದು ಅಜ್ಜರಕಾಡು ಸರ್ಕಾರಿ ಎ ಸಿ ಜಿಮ್‌ ಗೆ ಎಂದಿನಂತೆ ಬೆಳಿಗ್ಗೆ 7:30 ಗಂಟೆಗೆ ತೆರಳಿ 8:30 ಗಂಟೆಗೆ ಜಿಮ್‌ ವರ್ಕೌಟ್‌ ಮುಗಿಸಿ ಪಾದರಕ್ಷೆಯನ್ನು ಬದಲಾಯಿಸಲು ಹೊರಗೆ ಹೊರಟು ಪಾದರಕ್ಷೆಯನ್ನು ಇಡುವ ಸ್ಥಳದಲ್ಲಿ ಅದೇ ಜಿಮ್‌ ನ ಸದಸ್ಯನಾದ ಲಕ್ಷೀತ್ ಎಂಬಾತನು ಫಿರ್ಯಾದರಾರರನ್ನು ಕಂಡು ನಿಮ್ಮನ್ನು ಜಿಮ್‌ ಟ್ರೈನರ್‌ ಉಮೇಶ್ ರವರು ಕರೆಯುತ್ತಿದ್ದಾರೆ ಎಂದು ತಿಳಿಸಿದ ಮೇರೆಗೆ ಫಿರ್ಯಾದುದಾರರು ಉಮೇಶ್‌ ರವರ ಬಳಿ ಹೋಗಿ ವಿಚಾರಿಸಿದಾಗ ಅವರು ನಾನು ನಿಮ್ಮನ್ನು ಕರೆದಿರುವುದಿಲ್ಲ ಎಂದು ಹೇಳಿರುತ್ತಾರೆ.

ನಂತರ ಫಿರ್ಯಾದುದಾರರು ಪುನಃ ಲಕ್ಷಿತ್‌ ಎಂಬಾತನಲ್ಲಿ ಈ ಬಗ್ಗೆ ಕೇಳಲು ಹಿಂದಿನಿಂದ ಕರೆಯಲು ಹೋದಾಗ ಏಕಾಏಕಿ ಲಕ್ಷೀತ್ ನು ಜಿಮ್‌ ಸಲಕರಣೆ(ರಾಡ್)‌ ನಿಂದ ಫಿರ್ಯಾದುದಾರರ ತಲೆಗೆ ಹೊಡೆದು ಮಾರಾಣಾಂತಿಕ ಹಲ್ಲೆ ನಡೆಸಿ ಬೂಟುಗಾಲಿನಿಂದ ಹೊಟ್ಟೆಗೆ ಮತ್ತು ಬೆನ್ನಿನ ಭಾಗಕ್ಕೆ ಒದ್ದಿದ್ದು ರಕ್ತಗಾಯವಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 236/2024, ಕಲಂ: 118(1) 109 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

ಪ್ರತಿದೂರು:

ಲಕ್ಷೀತ್ (20) ಕೊಡವೂರು, ಉಡುಪಿ ಇವರು ಅಜ್ಜರಕಾಡು ನಲ್ಲಿರುವ ಸರ್ಕಾರಿ ಜಿಮ್‌ ಗೆ ಎಂದಿನಂತೆ ವ್ಯಾಯಾಮ ಮಾಡಲು ಹೋಗಿದ್ದು,ಬೆಳಿಗ್ಗೆ 8:30 ಗಂಟೆಗೆ ಫಿರ್ಯಾದುದಾರರು ಜಿಮ್‌ ಕೊಠಡಿ ಒಳಗೆ ಹೋದಾಗ ಪ್ರದೀಪ್‌ ಸ್ಯಾಮ್ಯುವೇಲ್‌ ಎಂಬಾತನು ಅವಾಚ್ಯ ಶಬ್ದಗಳಿಂದ ಬೈದು, ಕೆನ್ನೆ ಹಾಗೂ ಕುತ್ತಿಗೆ ಭಾಗಕ್ಕೆ ಹೊಡೆದು ಹಲ್ಲೆ ಮಾಡಿರುತ್ತಾನೆ.

ನಂತರ ಕೊಲೆ ಮಾಡುವ ಉದ್ದೇಶದಿಂದ ಜಿಮ್‌ ನಲ್ಲಿದ್ದ ರಾಡನ್ನು ಹಿಡಿದು ಹಲ್ಲೆ ಮಾಡಲು ಯತ್ನಿಸಿದಾಗ ಫಿರ್ಯಾದುದಾರರು ತಡೆಯಲು ಹೋದಾಗ ಬಲಕೈಗೆ ಪೆಟ್ಟಾಗಿದ್ದು,ಅಲ್ಲದೇ ಆರೋಪಿಯು ಫಿರ್ಯಾದುದಾರರನ್ನು ಉದ್ದೇಶಿಸಿ ಕೊಲೆ ಬೆದರಿಕೆ ಹಾಕಿರುತ್ತಾನೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 237/2024, ಕಲಂ: 118(1) 351(2) 352 BNS ರಂತೆ ಪ್ರಕರಣ ದಾಖಲಾಗಿದೆ.