ಉಡುಪಿ:ನಾವಿನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ಸೆಕ್ಷನ್ ಇನ್ಫಿನ್ 8, ಮಂಗಳೂರು ಇದರೊಂದಿಗೆ ದಿನಾಂಕ 24 ಅಕ್ಟೋಬರ್ 2024 ರಂದು ಒಡಂಬಡಿಕೆಗೆ ಸಹಿ ಹಾಕಲಾಯಿತು.
ಶ್ರೀ ವಿಶ್ವಾಸ್, ಸಂಸ್ಥಾಪಕ – ನಿರ್ದೇಶಕರು ಡಾ. ಶಿವಕಿರಣ್ ಮಖಂ,ಯೋಜನೆ ಮತ್ತು ತಂತ್ರಜ್ಞಾನ ನಿರ್ದೇಶಕರು, ಶ್ರಿ ಅರವಿಂದ್ ಸಿ ಕುಮಾರ್, ಸೆಕ್ಷನ್ ಇನ್ಫಿನ್ 8, ಮಂಗಳೂರು ಮತ್ತು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್, ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಜಗದೀಶ್ ಆಚಾರ್ಯ, ಶ್ರೀ ಹರೀಶ್ ಬೆಳ್ಮಣ್, ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ಉಪ ಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್, ಎಮ್.ಬಿ.ಎ ನಿರ್ದೇಶಕರಾದ
ಸೂರಜ್ ಪ್ರಾನ್ಸಿಸ್ ನೊರೊನ್ಹಾ ಮತ್ತು ಡೀನ್ ಡಾ. ನಾಗರಾಜ್ ಭಟ್ ಇವರೆಲ್ಲರ ಸಮ್ಮುಖದಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಯಿತು.
ಈ ಒಡಂಬಡಿಕೆಯ ಅಡಿಯಲ್ಲಿ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗಳಿಗೆ ಉದ್ಯಮಶೀಲತೆ ಮತ್ತು ಸ್ಟಾರ್ಟ್ಅಪ್ ಬೆಂಬಲಕ್ಕಾಗಿ ಅನೇಕ ಚಟುವಟಿಕೆಗಳಾದ ತರಬೇತಿ ಕಾರ್ಯಕ್ರಮಗಳು,
ನವೀನ ಚಿಂತನೆ, ವ್ಯವಹಾರ ಅಭಿವೃದ್ಧಿ, ಉದ್ಯಮಶೀಲ
ಕೌಶಲ್ಯಗಳು ಸೇರಿದಂತೆ ಆರ್ಥಿಕ ಬೆಂಬಲ ಮತ್ತು
ಮಾರ್ಗದರ್ಶನ ಸಹಿತ ವಿವಿಧ ಕಾರ್ಯಕ್ರಮವನ್ನು
ಕೈಗೊಳ್ಳಲಿದ್ದಾರೆ.
ಈ ಒಡಂಬಡಿಕೆಯು ಉಡುಪಿ ಪರಿಸರದಲ್ಲಿ ಉದ್ಯಮಶೀಲ ಪರಿಸರವನ್ನು ಅಭಿವೃದ್ಧಿಪಡಿಸಲು ಮತ್ತು ಉನ್ನತ ಶಿಕ್ಷಣದ ಮಾನದಂಡಗಳನ್ನು ಹೆಚ್ಚಿಸಲು ಮತ್ತು ವಿದ್ಯಾರ್ಥಿ ಸ್ಟಾರ್ಟ್ಅಪ್ಗಳನ್ನು ಯಶಸ್ವಿಯಾಗಿ ರೂಪಿಸಲು ಮತ್ತು ಶೈಕ್ಷಣಿಕ ಪಠ್ಯಕ್ರಮದಲ್ಲಿ ನವೀನತೆಗೆ ಉತ್ತೇಜನ ನೀಡಲು
ಸಹಕಾರಿಯಾಗಲಿದೆ.












