ಉಡುಪಿ:ಫೆ.26 ರಿಂದ 28 ರವರೆಗೆ ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ

ಉಡುಪಿ: ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಇದೇ ಫೆಬ್ರವರಿ 26 ರಿಂದ 28 ರವರೆಗೆ ಬೆಂಗಳೂರಿನ ಇಂಟರ್ ನ್ಯಾಷ಼ನಲ್ ಎಕ್ಸಿಬಿಷನ್ ಸೆಂಟರ್ ನಲ್ಲಿ ಕೆಐಟಿಇ 2025 ರ ಎರಡನೇ ಆವೃತಿಯು ಆಯೋಜಿಸಲಾಗಿದೆ.

ಕೆ.ಐ.ಟಿ.ಇ 2025 ಪ್ರವಾಸೋದ್ಯಮದ ಪ್ರಮುಖ ಪಾಲುದಾರರನ್ನು ಒಟ್ಟುಗೂಡಿಸುತ್ತಿದೆ, ಇದು ಜಗತ್ತಿನಾದ್ಯಂತದ ಪ್ರಯಾಣ ಮತ್ತು ವ್ಯಾಪಾರ ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ಒಂದು ಅನನ್ಯ ಅವಕಾಶವನ್ನು ನೀಡುತ್ತಿದೆ ಈ ಕಾರ್ಯದಲ್ಲಿ 30 ಕ್ಕೂ ಹೆಚ್ಚು ದೇಶಗಳಿಂದ 400 ಕ್ಕೂ ಹೆಚ್ಚು ಆತಿಥೇಯ ಖರೀದಿದಾರರು ಮತ್ತು 50 ಮಾಧ್ಯಮಗಳು ಭಾಗವಹಿಸಲ್ಲಿದ್ದಾರೆ ದೇಶದಲ್ಲಿ ಇದುವರೆಗಿನ ಅತಿದೊಡ್ಡ ಬಿ2ಬಿ ಇನ್ ಬೌಂಡ್ ಮತ್ತು ದೇಶೀಯ ಬಿ2ಬಿ ಟ್ರಾವೆಲ್ ಈವೆಂಟ್ ಕಾರ್ಯಕ್ರಮವಾಗಿರುತ್ತದೆ ಆನ್ಲೈನ್ ಅಪಾಯಿಂಟ್ಮೆಂಟ್ ಬಿ2ಬಿ ವ್ಯವಸ್ಥೆ ಇರುತ್ತದೆ.

ಸ್ಥಳೀಯ ರೆಸಾರ್ಟ್ಗಳ ಮಾಲಿಕರು, ಪ್ರಯಾಣ ನಿರ್ವಾಹಕರು, ಹೋಟೆಲ್ ಉದ್ಯಮಿಗಳು ಮತ್ತು ಇತರೆ ಉದ್ಯಮ ಪ್ರತಿನಿಧಿಗಳು ಉಡುಪಿ ಜಿಲ್ಲೆಯ ಶ್ರೀಮಂತ ಮತ್ತು ವೈವಿಧ್ಯಮಯ ಪ್ರವಾಸೋದ್ಯಮ ಕೊಡುಗೆಗಳನ್ನು ಪ್ರದರ್ಶಿಸಲು ಹಾಗೂ ಭಾಗವಹಿಸಲು ಅವಕಾಶವಿದೆ.

ಉಡುಪಿ ಜಿಲ್ಲೆಯ ಪಾಲುದಾರರು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು, ಸಾಂಸ್ಕೃತಿಕ, ಪರಂಪರೆ, ಭೋಜನಶಾಸ್ತ್ರ ಮತ್ತು ಇತರೆ ಪ್ರವಾಸೋದ್ಯಮ ಉತ್ಪನ್ನಗಳನ್ನು ದೇಶಿಯ ಹಾಗೂ ಜಾಗತಿಕ ಟೂರ್ ಅಂಡ್ ಟ್ರಾವೆಲ್ ಸಮುದಾಯಕ್ಕೆ ಪರಿಚಯಿಸಬಹುದಾಗಿದ್ದು, ಅದರಂತೆ ಕೆ.ಐ.ಟಿ.ಇ 2025 ರಲ್ಲಿ ಮಳಿಗೆಗಳನ್ನು ಪಡೆದು ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್: https://www.karnatakatravelexpo.org ಅಥವಾ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ, ‘ಎ’, ಬ್ಲಾಕ್, ಎರಡನೇ ಮಹಡಿ, ಕೊಠಡಿ ಸಂಖ್ಯೆ : 303 , ರಜತಾದ್ರಿ, ಮಣಿಪಾಲ ಉಡುಪಿ ಜಿಲ್ಲೆ. – 576104 ದೂರವಾಣಿ: 0820-2574868 ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಕಚೇರಿ ಪ್ರಕಟಣೆ ತಿಳಿಸಿದೆ.